Belagavi News In Kannada | News Belgaum

ಬೆಳಕುಣಿ ಗ್ರಾಮದಲ್ಲಿ ಜಲಾಮೃತ ಬೀದಿನಾಟಕ

 

ಕಮಲನಗರ: ಜಿಲ್ಲಾ ಪಂಚಾಯತ ಬೀದರ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೀದರ, ಸ್ವಚ್ಚ ಭಾರತ ಮಿಷನ್(ಗ್ರಾ) ಎಸ್ ಬಿ ಎಂ. ಯೋಜನೆಯಡಿ ಮಾಹಿತಿ ಶಿಕ್ಷಣ ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಅನುಷ್ಠಾನ  ಬೆಂಬಲ ಸಂಸ್ಥೆ, ಮತ್ತು  ಲಾಲಬಹಾದ್ದೂರ ಶಿಕ್ಷಣ ಸಂಸ್ಥೆ ಬೀದರ ಇವರ ಸಹ ಆಯೋಜಕತ್ವದಲ್ಲಿ ಆಗಸ್ಟ್ 8 ರಂದು ಮಂಗಳವಾರ ‘ನಂದೀಶ್ವರ ನಾಟ್ಯ ಸಂಘ ಚಿಮಕೋಡ (ನನಾಸಂ)’ ತಂಡದ ವತಿಯಿಂದ ಕಮಲನಗರ ತಾಲೂಕಿನ ಬೆಳಕುಣಿ (ಬಿ) ಗ್ರಾಮದಲ್ಲಿ ಜನಜಾಗೃತಿ ಬೀದಿನಾಟಕ ಪ್ರದರ್ಶನ ಮಾಡಲಾಯಿತು.

ಬೀದಿನಾಟಕ ಪ್ರದರ್ಶನದಲ್ಲಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ನೆೃರ್ಮಲ್ಯ ಹಾಗು ಸ್ವಚ್ಚತೆ ಕುರಿತು ಜಲಾಮೃತ ಎಂಬ ಬೀದಿ ನಾಟಕ  ಮತ್ತು ಹರ್ ಘರ್ ಕೂ ಪಾನಿ, ನಳ್ ಸೆಝಲ್, ಮನೆ ಮನೆಗೆ ಗಂಗೆ ಎಂಬ ಗೀತರೂಪಕ ನಾಟಕದ ಹಾಡುಗಳ  ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಬೆಳಕುಣಿ (ಬಿ) ಗ್ರಾಮ ಪಂಚಾಯತ ಅಧ್ಯಕ್ಷರಾದ ಅಭಿಲಾಶ ಮೇತ್ರೆ ಅವರು ಹಲಿಗೆ ನುಡಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಈ ವೇಳೆ ನಂದೀಶ್ವರ ನಾಟ್ಯ ಸಂಘದ ಅಧ್ಯಕ್ಷರಾದ ದೇವದಾಸ ಚಿಮಕೋಡ ಸಹಕಲಾವಿದರಾದ ಬಕ್ಕಪ್ಪ ದಂಡಿನ, ವೀರಶೆಟ್ಟಿ ಸಿಂಧೆ, ರಾಜಕುಮಾರ ಫುಲೆ, ಸಿದ್ದಲಿಂಗ ಸುಣಗಾರ, ಯಾಲ್ಲಾಲಿಂಗ ಸುಣಗಾರ ಹಾಗೂ ಅಪಾರ ಜನಸಮೂಹ ಉಪಸ್ಥಿತರಿದ್ದರು.