ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ ಸ್ವೀಕರಿಸಿದ ಅಲ್ಲಮಖಾನ ಅ ದೇಸಾಯಿ

ಬೆಳಗಾವಿ: 8-8-2023 ಪಾಶ್ಚಾಪೂರ ಗ್ರಾಮದ ಮಾರ್ಕಂಡೇಯ ಪೌಂಡೆಶನದ ಸನ್ಮಾನ್ಯ ಶ್ರೀ ಅಲ್ಲಮಖಾನ ಅಬ್ದುಲಾ ದೇಸಾಯಿಯವರಿಗೆ
ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ
ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಸಂಸ್ಥೆಯವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಯನ್ನು ನೀಡುತ್ತಾ ಗೌರವಿಸುತ್ತಾ ಬಂದಿರುತ್ತಾರೆ. ಎಂದು
ಈ ಸಂಸ್ಥೆಯವರು ನೀಡುವ ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕುವೆಂಪು ವಿಶ್ವಮಾನವ ಕನ್ನಡ ರತ್ನ ಈ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದ ಹೆಸರಾಂತ ಸಮಾಜ ಸೇವಕರಾದ ಮೌಲಾನಾ ಅಲ್ಲಮಖಾನ ಅ ದೇಸಾಯಿ ಆಯ್ಕೆ ಆಗಿದ್ದರು.
ಮೌಲಾನಾ ಅಲ್ಲಮಖಾನ ಅ ದೇಸಾಯಿಯವರು ತಮ್ಮ ಮದರಸಾ ಕುತುಬ್ -ಉಲ್ -ಉಲೂಮ್ ದಲ್ಲಿ ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.
ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರ ಪೂರೈಸುತ್ತಿದ್ದಾರೆ.
ಇವರಿಂದ ಸ್ಥಾಪಿಸಲ್ಪಟ್ಟ ಮಾರ್ಕಂಡೇಯ ಫೌಂಡೇಶನ್ ಅಧೀನದಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರಖ್ಯಾತ ವೈದ್ಯರನ್ನು ಕರಿಸಿ ಉಚಿತ ಆರೋಗ್ಯ ಸೇವೆ ಹಾಗೂ ಉಪಚಾರವನ್ನು ನೀಡಿ ಜಾತ್ಯಾತೀತ ಮನೋಭಾವದಿಂದ ಸಮಾಜದಲ್ಲಿರುವ ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಪ್ರತಿ ವರ್ಷ ಸರ್ವಧರ್ಮ ಸಮ್ಮೇಳನವನ್ನು ಹಮ್ಮಿಕೊಂಡು ಎಲ್ಲ ಸಮಾಜದ ಗಣ್ಯ ವ್ಯಕ್ತಿಗಳನ್ನು ಪ್ರಖ್ಯಾತ ಮಠಾಧೀಶರನ್ನು ಹಾಗೂ ಕ್ರೈಸ್ತ ಧರ್ಮದ ಪಾದ್ರಿಗಳನ್ನು ಆಹ್ವಾನಿಸಿ ಸಮಾಜದ ಎಲ್ಲಾ ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸುತ್ತಿದ್ದಾರೆ. ಎಂದು
ಇವರ ಸಮಾಜದ ಕಾರ್ಯವನ್ನು ಗುರುತಿಸಿದ ಕಲಾನಿ ಕೇತನ ಸಂಸ್ಥೆಯು ದಿನಾಂಕ 8.8.2023 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ ಮಾನ್ಯ ಶ್ರೀ ಮೌಲಾನಾ ಅಲ್ಲಮಖಾನ ದೇಸಾಯಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ
ದಿನಾಂಕ 8-8-2023ರಂದು ಮಂಗಳವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಯಿಂದ ಆಯೋಜಿಸಿದ ರಾಷ್ಟ್ರ ಕವಿ ಕುವೆಂಪು ಕನ್ನಡ ರತ್ನ ಪ್ರಶಸ್ತಿ ಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ಎಸ್. ತಂಗಡಗಿ ಯವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದ್ದಕ್ಕೆ ಕರ್ನಾಟಕ ಘನ ಸರಕಾರದ ಸಭಾಧ್ಯಕ್ಷ ರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ ಸಾಹೇಬರು ಸನ್ಮಾನಿತರನ್ನು ಆತ್ಮೀಯವಾಗಿ ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿದ ಕ್ಷಣ. ಈ ಸಂದರ್ಬದಲ್ಲಿ ಸನ್ಮಾನಿತರ ತಂದೆಯವರಾದ ಅಬ್ದುಲ್ಲಾ ದೇಸಾಯಿಯವರು ಹಾಗೂ ಕುಟುಂಬದ ಸದಸ್ಯರು ಮತ್ತು ಗೆಳೆಯರು ಪಾಲ್ಗೊಂಡಿದ್ದರು.