Belagavi News In Kannada | News Belgaum

ಜೆಜೆಎಂ ಕಾಮಗಾರಿ ಕಳಪೆ ಕೆಲಸ ಎಂದು ಗ್ರಾಪಂ ಸದಸ್ಯ ರವಿ ಹಂಜಿ.

ಹುಕ್ಕೇರಿ : ತಾಲೂಕಿನ ಯಮಕನಮರಡಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮ ಮತ್ತು ಸಾಮಾನ್ಯ ಸಭೆಯ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಬುಧವಾರ ನಡೆಯಿತು.
ಯಮಕನಮರಡಿಯ ಗ್ರಾಮದಲ್ಲಿ ನಡೆದಿರುವ ಜೆಜೆಎಂ ಕಾಮಗಾರಿಯಲ್ಲಿ ಪ್ರತಿ ಮನೆ-ಮನೆಗೆ ನಳಗಳ ಜೋಡಣೆ ಆಗಿಲ್ಲಾ ಹಾಗೂ ಕಳೆಪೆ ದರ್ಜೆ ಸಲಕರಣೆ ಬಳಕೆ ಮಾಡಿದ್ದಾರೆ.

ಇದರ ಬಗ್ಗೆ ಹುಕ್ಕೇರಿ ಅಭಿಯಂತರರು ಗಮನ ಹರಿಸುತ್ತಿಲ್ಲಾ ಮೊದಲನೆ ಹಾಗೂ ಎರಡನೇಯ ಹಂತದ ಹಣವನ್ನು ಗ್ರಾಪಂಯವರು ನೀಡಬಾರದು ಇದಕ್ಕೆ ನಮ್ಮ ಎಲ್ಲ ಗ್ರಾಪಂ ಸದಸ್ಯರ ಒಪ್ಪಿಗೆ ಇಲ್ಲಾ ಹಾಗೂ ವಿರೋಧ ಇದೆ ಎಂದರು ಗ್ರಾಪಂ ಸದಸ್ಯರ ರವಿ ಹಂಜಿ ಆರೋಪಿಸಿದರು.

ನೀರು ಮತ್ತು ನೈರ್ಮಲ್ಯ ಸಮಿತಿಯ ಉಪಾಧ್ಯಕ್ಷ ಕಿರಣ ರಜಪೂತ ಮಾತನಾಡಿ ಗ್ರಾಮದಲ್ಲಿ ಕೋಟೆಯ ಸುತ್ತಲು ಕೆಲ ಕಟ್ಟಡಗಳು ಅಕ್ರಮ ನಿರ್ಮಾಣ ಹಾಗೂ ಅಸ್ವಚ್ಚತೆಯಿಂದ ವಾಸನೆ ಬರುತ್ತಿದೆ ಪರ್ಯಾಯ ವ್ಯವಸ್ಥೆ ಮಾಡಬೇಕು ಮತ್ತು ಕಸವಿಲೇವಾರಿ ಘಟಕ ಬಗ್ಗೆ ಸ್ಥಳವನ್ನು ಪರೀಶಿಲನೆ ನಡೆಸಿ ಗ್ರಾಮದ ಕಸವನ್ನು ದಾಸ್ತಾನು ಮಾಡಬೇಕು, ಈ ಹಿಂದೆ

 ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಮಾಡಿದ ಕೆಲಸ ಹಣ ನೀಡಬೇಕಾಗಿದೆ ಕಾರಣ ಪ್ರತಿ ತಿಂಗಳ ನೀರಿನ ಕರ 1.50ಲಕ್ಷ ರೂ ಸಂಗ್ರಹವನ್ನು ಗ್ರಾಪಂ ಸಿಬ್ಬಂದಿ ಮಾಡಬೇಕು
ಪಿಡಿಒ ಶಿವಲಿಂಗ ಢಂಗ ಮಾತನಾಡಿ ಅಭಿವೃದ್ದಿ ವಿಷಯದಲ್ಲಿ ಎಲ್ಲರ ಸಹಕಾರ ಅವಶ್ಯ ಎಂದರು.

ಗ್ರಾಪಂ ಅಧ್ಯಕ್ಷ ಆಸ್ಮಾ ಅಹ್ಮದಸಾಬ ಫಣಿಬಂದ, ಉಪಾಧ್ಯಕ್ಷ ರಾಜು ಕುದರೆ, ಗ್ರಾಪಂ ಸದಸ್ಯ ಕುಶಾಲ ರಜಪೂತ, ಉದಯ ನಿರ್ಮಳ, ರಾಜು ಮೇತ್ರಿ, ಜಯಶ್ರೀ ಅತ್ತೀಮರದ, ಪ್ರೇಮಾ ಯಾದವಾಡಿ, ಅಜೀತ ಮಗದುಮ್ಮ, ಅಸ್ಲಾಂ ಪಕ್ಕಾಲಿ, ಓಂಕಾರ ತುಬಚಿ ಮುಂತಾದವರು ಇದ್ದರು.