Belagavi News In Kannada | News Belgaum

ಮೊದಲ ಮಹಿಳಾ ಪೊಲೀಸ್ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ರೇಣುಕಾ ಕೆ ಸುಕುಮಾರ್ ಅವರನ್ನು ಕರ್ನಾಟಕ ಸರ್ಕಾರ ಬುಧವಾರ ನೇಮಕ ಮಾಡಿದೆ..

ಧಾರವಾಡ: ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದ ಮೊದಲ ಮಹಿಳಾ ಪೊಲೀಸ್ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ರೇಣುಕಾ ಕೆ ಸುಕುಮಾರ್ ಅವರನ್ನು ಕರ್ನಾಟಕ ಸರ್ಕಾರ ಬುಧವಾರ ನೇಮಕ ಮಾಡಿದೆ..

 

ರೇಣುಕಾ ಅವರು ಈ ಹಿಂದೆ ಕಮಿಷನರೇಟ್‌ನಲ್ಲಿ ಉಪ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ಸೇವೆ ಸಲ್ಲಿಸಿದ್ದರು. ಆಗಸ್ಟ್ 9 ರಂದು ಹೊರಡಿಸಿದ ವರ್ಗಾವಣೆ ಆದೇಶದಲ್ಲಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಬದಲಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ..

ಹುಬ್ಬಳ್ಳಿ-ಧಾರವಾಡ ಕಮಿಷನರ್ ಹುದ್ದೆಯನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಸಮನಾಗಿ ಪರಿಗಣಿಸಲಾಗುವುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ..

2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ರೇಣುಕಾ ಅವರು ಪ್ರಸ್ತುತ ಡೆಪ್ಯುಟಿ ಕಮಾಂಡೆಂಟ್ ಜನರಲ್, ಗೃಹ ರಕ್ಷಕರು ಮತ್ತು ಸಿವಿಲ್ ಡಿಫೆನ್ಸ್‌ನ ಪದನಿಮಿತ್ತ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ..

ಅವರು ಈ ಹಿಂದೆ ಮಾರ್ಚ್ 2018 ರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮೊದಲ ಮಹಿಳಾ ಅಧಿಕಾರಿಯೂ ಹೌದು. ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪ್ರಸಿದ್ಧಿಪಡೆದಿರುವ ರೇಣುಕಾ ಅವರು ಶಿಸ್ತಿನ ಸಿಪಾಯಿ ಎಂದೇ ಖ್ಯಾತಿ ಪಡೆದಿದ್ದಾರೆ..