Belagavi News In Kannada | News Belgaum

ಮಕ್ಕಳ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ: ಪಿ. ಮುರಳಿ ಮೋಹನ ರೆಡ್ಡಿ

“ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ

ಮಕ್ಕಳ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ: ಪಿ. ಮುರಳಿ ಮೋಹನ ರೆಡ್ಡಿ

ಬೆಳಗಾವಿ, ಆ.09 : ಜಿಲ್ಲಾ ಆಡಳಿತ, ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇಂತಹ ತರಬೇತಿ ಕಾರ್ಯಾಗಾರವು ತುಂಬಾ ಮಹತ್ವವಾಗಿದ್ದು, ಸಂವಿದಾನದ ಅನುಚ್ಛೇದ 21 (ಎ) ಪ್ರಕಾರ 6 ರಿಂದ 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಅದರಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪಿ. ಮುರಳಿ ಮೋಹನ ರೆಡ್ಡಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸೇವಕ ಸಂಸ್ಥೆ, ಬೆಳಗಾವಿ ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ, ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಸಭಾಗೃಹದಲ್ಲಿ ಮಂಗಳವಾರ (ಆ.8) ರಂದು ಬೆಳಿಗ್ಗೆ 10 ಗಂಟೆಗೆ “ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ” ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರಿಗೆ ಜಿಲ್ಲಾ ಮಟ್ಟದ ಬಲವರ್ಧನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳು ಹಾಗೂ ಯಾವುದೇ ಕಾಯ್ದೆ ಕಾನೂನುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಬರುವಂತಹ ಪ್ರಕರಣಗಳು ತುಂಬಾ ಗಂಭೀರವಾಗಿರುತ್ತವೆ. ಅಂತಹ ಪ್ರಕರಣಗಳನ್ನು ಹೇಗೆ ಬಗೆಹರಿಸಬೇಕು ಮತ್ತು ಅದಕ್ಕೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕೆಂಬುದು ತಿಳಿಯುವುದಿಲ್ಲ. ಏಕೆಂದರೆ ಕೆಲವು ಸಂದರ್ಭದಲ್ಲಿ ಮಾನವಿಯತೆ ದೃಷ್ಠಿಯಿಂದ ಕಾರ್ಯನಿರ್ವಹಿಸಬೇಕೋ ಅಥವಾ ಕಾನೂನಿನ ದೃಷ್ಠಿಯಿಂದ ಕಾರ್ಯನಿರ್ವಹಿಸಬೇಕೋ ಎಂಬುದು ತಿಳಿಯುವುದು ಕಷ್ಟವಾಗಿರುತ್ತದೆ. ಆದ್ದರಿಂದ ನಾವು ಮಕ್ಕಳಿಗೆ ನ್ಯಾಯಯುತವಾದ ಮಾರ್ಗವನ್ನು ತೋರಿಸಿ ಮಕ್ಕಳ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದುರು
, ಪಂಚಾಯತ ರಾಜ್ಯ ಅಧಿನಿಯಮ ಕಾಯ್ದೆ 1993ರ ತಿದ್ದುಪಡಿ 2015ರ ಪ್ರಕಾರ ಗ್ರಾಮ ಪಂಚಾಯತ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಕಾವಲು ಸಭೆ ಮಾಡುವುದು ಕಡ್ಡಾಯವಾಗಬೇಕು. ಏಕೆಂದರೆ ಎಲ್ಲಿಯೂ ಕೂಡ ಕಾವಲು ಸಮಿತಿ ಸಭೆ ನಡೆಯುತ್ತಿಲ್ಲ ಕೇವಲ ನಡುವಳಿಯಲ್ಲಿ ಮಾತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಜಿಲ್ಲೆಯಲ್ಲಿ ಮಹಿಳೆ & ಮಕ್ಕಳ ರಕ್ಷಣೆ ಆಗಬೇಕೆಂದರೆ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಹೊನೆಗಾರರಾಗದೇ, ಗ್ರಾಮ ಲೆಕ್ಕಾಧಿಕಾರಿಗಳು, ಬೀಟ್ ಪೊಲೀಸ್, ಶಾಲಾ ಮುಖ್ಯೋಪಾಧ್ಯಯರಿಗೆ ಸಮಿತಿಯ ಬಗ್ಗೆ ಅರಿವು ಮೂಡಿಸುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯವಾಗಿದ್ದು, ಇವರಿಗೆ ಅರಿವು ಜವಾಬ್ದಾರಿ ಮೂಡಿಸಿದ್ದೇ ಆದಲ್ಲಿ ಪೋಕ್ಸೋ, ಆರ್.ಟಿ.ಇ. ಬಾಲ್ಯವಿವಾಹ, ಬಾಲಕಾರ್ಮಿಕ ಹಾಗೂ ಕಾನೂನಿನೊಡನೆ ಸಂಘರ್ಷಕ್ಕೊಳಗಾದ ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿ ಮೇಲಾಧಿಕರಿಗಳ ಗಮನಕ್ಕೆ ತಂದು ತಕ್ಷಣಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬಹುದು. ಈ ರೀತಿ ಕಡ್ಡಾಯವಾಗಿ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ 3 ತಿಂಗಳಿಗೊಮ್ಮೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚಿಸಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ಮಾಡುವಲ್ಲಿ ಸೇವೆ ಸಲ್ಲಿಸೋಣ ಎಂದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಹೇಳಿದರು
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಾಸುದೇವ ಶರ್ಮಾ ಎನ್.ವಿ. ಕಾರ್ಯಕಾರಿ ನಿರ್ದೇಶಕರಾದ ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು, ಹಾಗೂ ಹರೀಶ ಜೋಗಿ ಸಂಯೋಜಕರು, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳ, ಇವರು ತಮ್ಮ ವಿಷಯ ಮಂಡನೆಯಲ್ಲಿ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕೆಂದರೆ, ಬಾಲ್ಯವಿವಾಹ, ಬಾಲಕಾರ್ಮಿಕ, ಜೀತ ಪದ್ಧತಿ, ಅಡತಡೆ ಉಂಟು ಮಾಡುತ್ತದೆ. ಅದನ್ನು ತಡೆಯುವ ಅಧಿಕಾರ ನಮಗೆ ಇದೆ. ಈ ಹಕ್ಕನ್ನು ನಮಗೆ ಸಂವಿಧಾನ ಕೊಟ್ಟಿದೆ. 2019ರ ವರದಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಮಾಡುವದರಲ್ಲಿ 4ನೇ ಸ್ಥಾನ ಇದೆ ಎಂದು ಸರ್ವೇಯಲ್ಲಿ ತಿಳಿದು ಬಂದಿರುತ್ತದೆ. ಆದ್ದರಿಂದ ಇದನ್ನು ಕೆಳಹಂತಕ್ಕೆ ತರುವುದು ನಮ್ಮ ಕರ್ತವ್ಯವಾಗಿದೆ. ಎಸ್.ಐ.ಆರ್.ಡಿ. ಸಂಸ್ಥೆ ಮೈಸೂರು ಅಧ್ಯಯನದ ಪ್ರಕಾರ 80% ರಷ್ಟು ಪಂಚಾಯತಿಗಳು ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳ ಹಾಗೂ ಕಾಯ್ದೆಗಳ ಅನುಷ್ಠಾನದ ಕುರಿತು ಗುರಿ ಮುಟ್ಟಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಬಾಲ ಕಾರ್ಮಿಕ ಪದ್ಧತಿ ಆಗದಂತೆ ನೋಡಿಕೊಳ್ಳೋಣ. ವಲಸೆ ಹೋಗುವವರ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಪ್ರತ್ಯೇಕವಾದ ದಾಖಲಾತಿಯನ್ನು ನಿರ್ವಹಿಸಿ ಸದರಿ ಮಾಹಿತಿಯನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಹತ್ತಿರ ಕೊಡಬೇಕು. ಎಂದು ಡಾ. ವಾಸುದೇವ ಶರ್ಮಾ ಎನ್.ವಿ. ಅವರು ಹೇಳಿದರು
ಬೆಳಗಾವಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬೆಳಗಾವಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ಆರ್.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸಿಸ್ಟರ್ ಲೂರ್ದ್ ಮೇರಿ ಜೆ ಹಾಗೂ ಚಿಕ್ಕೋಡಿ, ನಿಪ್ಪಾಣಿ ಹುಕ್ಕೇರಿ ಸಿಡಿಪಿಒಗಳು ಭಾಗವಹಿಸಿದರು. ಹಾಗೂ. ಶೋಭಾ ಗಸ್ತಿ, ಗೌರವಾನ್ವಿತ ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪ್ರಶಸ್ತಿ ಪುರಸ್ಕøತರು ರಾಯಬಾಗ ಇವರು ಸದರಿ ಕಾರ್ಯಾಗಾರವನ್ನು ಮುಂದುವರೆಸಿದರು. ಸದರಿ ಕಾರ್ಯಕ್ರಮ ನಿರೂಪಣೆಯನ್ನು ಜೆ.ಟಿ. ಲೋಕೇಶ್ವರಪ್ಪಾ ನೇರವೆರಿಸಿದರು.////

 

“ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ

 

ಬೆಳಗಾವಿ, ಆ.09 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆ, ರೋಟರಿ ದರ್ಶನ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಬೆಳಗಾವಿ ಇವರ ಸಹಯೋಗದಲ್ಲಿ ಆ.7 2023 ರಂದು “ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನ ಕಾರ್ಯಕ್ರಮ ಉದ್ಘಾಟನಾ ಸಮಾರಂಭವು ಜರುಗಿತು.
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಸೋವiನ್ನಾಚೆ ಅವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಗಾವಿ ಉತ್ತರ ಶಾಸಕರಾದ ಆಸಿಪ್ (ರಾಜು) ಶೇಠ್ ಅವರು ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನದ ಲಸಿಕಾ ಸಸ್ತ್ರದಲ್ಲಿ (ಶೇಶನ್) ಅರ್ಹ ಮಕ್ಕಳಿಗೆ ಲಸಿಕಾ ಹನಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಆರೋಗ್ಯ ಇಲಾಖೆ ಲಸಿಕೆಗಳಿಂದ ಅನೇಕ ಖಾಯಿಲೆಗಳನ್ನು ನಿರ್ಮೂಲನೆ ಮತ್ತು ಹತೋಟಿಯಲ್ಲಿ ಇಟ್ಟಿದ್ದು, ನಮ್ಮ ಜಿಲ್ಲೆಯಲ್ಲಿ ಯಾರೂ ಲಸಿಕೆಯಿಂದ ವಂಚಿತರಾಗದೇ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಲಸಿಕೆಗಳನ್ನು ಪಡೆದುಕೊಂಡು ಸದೃಡ ರಾಷ್ಟ್ರ ನಿರ್ಮಾಣಕ್ಕೆ ಕೈಜೊಡಿಸಬೇಕೆಂದು ತಿಳಿಸಿ ಮಿಷನ್ ಇಂದ್ರಧನುಷ 5.0 ಅಭಿಯಾನದ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹದ ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಅಗಷ್ಟ 7 ರಿಂದ 12 ರವರೆಗೆ ಮೊದಲನೆ ಸುತ್ತು, ಸಪ್ಟೆಂಬರ 11 ರಿಂದ 16 ರವರೆಗೆ 2ನೇ ಸುತ್ತು. ಹಾಗೂ ಅಕ್ಟೋಬರ 9 ರಿಂದ 14 ರವರೆಗೆ 3ನೇ ಸುತ್ತು ಈ ಮೂರು ಸುತ್ತುಗಳಲ್ಲಿ ತೀವ್ರ ಇಂದ್ರದನುಷ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಹಾಗೂ ಲಸಿಕಾಧಿಕಾರಿ ಡಾ.ಚೇತನ ಕಂಕಣವಾಡಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ “ಪರಿಣಾಮಕಾರಿ ಮಿಷನ್ ಇಂದ್ರಧನುಷ 5.0 ಅಭಿಯಾನದಡಿ ಸೂಕ್ತ ತಯಾರಿಗಳನ್ನು ಮಾಡಿಕೊಂಡಿದ್ದು, ಸಮೀಕ್ಷೆ ಮೂಲಕ ಲಸಿಕೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲಾಗುವ ಲಸಿಕೆಯನ್ನು ಪಡೆಯದೇ ಅಥವಾ ಅರ್ಧಕ್ಕೆ ಬಿಟ್ಟುಹೋದ ಒಟ್ಟು 11536 ಎರಡು ವರ್ಷದೊಳಗಿನ ಮಕ್ಕಳು’ 2943 ಎರಡ ರಿಂದ ಐದು ವರ್ಷದ ಮಕ್ಕಳು ಹಾಗೂ 2596 ಗರ್ಭಿಣಿಯರು, ತೀವ್ರತರ ಮಿಷನ್ ಇಂದ್ರದನುಷ 5.0 ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು ಇದಕ್ಕಾಗಿ 32 ಮೊಬೈಲ್ ಲಸಿಕಾ ತಂಡಗಳನ್ನು ಮತ್ತು 1129 ಲಸಿಕಾ ಸಸ್ತ್ರಗಳನ್ನು ಜಿಲ್ಲೆಯಾದ್ಯಂತ ಆಯೋಜನೆ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆಯದ ಗರ್ಬಿಣಿ ಮತ್ತು ಮಕ್ಕಳ ಪಾಲಕರು ತಮ್ಮ ಸಮೀಪದ ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಬೇಟಿನೀಡಿ ಲಸಿಕೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಅವರು ತಿಳಿಸಿದರು.
ರೋಟರಿಯನ್ ಕೋಮಲ್ ಕೋಳಿಮಠ ಅಧ್ಯಕ್ಷರು ರೋಟರಿ ದರ್ಶನ ಬೆಳಗಾವಿ ಅವರು ಮಾತನಾಡಿ ಮಾರಕ ರೋಗಗಳ ವಿರುದ್ದ ನೀಡುತ್ತಿರುವ ಲಸಿಕೆಗಳಿಂದ ಯಾರೂ ವಂಚಿತರಾಗಬಾರದು ಲಸಿಕೆಗಳು ಪರಿಣಾಮಕಾರಿಗಳಾಗಿವೆ ಎಂದು ತಿಳಿಸಿದರು.
ಡಾ.ಶಿವಾನಂದ ಮಾಸ್ತಿಹೋಳಿ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ ಎಲ್ಲರಿಗೂ ಸ್ವಾಗತಿಸಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ ಬರುವ ಲಸಿಕೆಗಳ ಕುರಿತು ಮಾಹಿತಿಯನ್ನು ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ರೇಷ್ಮಾ ಪಾಟೀಲ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಬಿಮ್ಸ್ ನಿರ್ದೇಶಕರಾದ ಡಾ.ಅಶೊಕ ಶೇಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುಧಾಕರ ಆರ್.ಸಿ, ಬಿಮ್ಸ್ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಸರೋಜ ತಿಗಡಿ, ಬೆಳಗಾವಿ ವೃತ್ತದ ಸಮೀಕ್ಷಣಾ ವೈದ್ಯಾಕಾರಿ ಡಬ್ಲೂ ಎಚ್ ಓರಾದ ಡಾ.ಸಿದ್ದಲಿಂಗಯ್ಯಾ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು. ಬಿ.ಪಿ ಯಲಿಗಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮ ನಿರೂಪಿಸಿದರು. ಶಿವಾಜಿ ಮಾಳಗೆನ್ನವರ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಂದಿಸಿದರು.