Belagavi News In Kannada | News Belgaum

ಪರಿಸರ ಸ್ವಾಸ್ಥ ಕಾಪಾಡಿಕೊಳ್ಳುವ ಹಾಗೂ ಅರಿವು

ಹುಕ್ಕೇರಿ; ದೇವಸ್ಥಾನ, ಶಾಲೆ, ಆಸ್ಪತ್ರೆ, ವಸತಿ ನಿಲಯಗಳ ಸೇರಿದಂತೆ ಸಾರ್ವಜನಿಕ ಸ್ಥಳಗಳ ಪರಿಸರ ಸ್ವಾಸ್ಥ ಕಾಪಾಡಿಕೊಳ್ಳುವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಜುನಾಥೇಶ್ವರ ವಿಪತ್ತು ನಿರ್ವಹನಾ ಶೌರ್ಯ ಸಮಿತಿ ಸದಸ್ಯರು ಸೇವಾ ಮನೋಭಾವನೆಯಿಂದ ನಿರ್ವಹಿಸುತ್ತಿರುವ ಕಾರ್ಯ ಅನನ್ಯವೆಂದು ಹುಕ್ಕೇರಿ ಧರ್ಮಸ್ಥಳ ಕ್ಷೇತ್ರಭಿವೃಧ್ದಿಯೋಜನಾಧಿಕಾರಿ ಅನಿತಾ ಟಿ ಹೇಳಿದರು..

ಅವರು ಧರ್ಮಸ್ಥಳ ಕ್ಷೇತ್ರಾಭಿವೃದ್ದಿ ಯೋಜನೆಯ ಹುಕ್ಕೇರಿ ಘಟಕದ ವಿಪತ್ತು ನಿರ್ವಹಣಾ ಶೌರ್ಯ ಸಮಿತಿಯ ಸದಸ್ಯರು ಪಟ್ಟಣದ ಕೋಟೆ ಭಾಗದ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಶ್ರಮಧಾನ ಮೂಲಕ ಗಿಡಗಂಟಿ ತೆರವು ಹಾಗೂ ಸ್ವಚ್ಚತೆ ಮಾಡಿದ ಹಿನ್ನಲೆ ಅವರನ್ನು ಅಭಿನಂದಿಸಿ ಮಾತನಾಡಿದರು. ತಾಲೂಕಿನಲ್ಲಿ ಏಳು ವಲಯಗಳಲ್ಲಿ ವಿಪತ್ತು ನಿರ್ವಹಣಾ ತಂಡದವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಹುಕ್ಕೇರಿ ಘಟಕದ ಸಂಯೋಜಕ ಪಾರ್ವತಿ ಡಿ ಮಾತನಾಡಿ ಅವರು ಹುಕ್ಕೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಡಾ ವಿರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ಹುಕ್ಕೇರಿ ಘಟಕದ ವಿಪತ್ತು ನಿರ್ವಹಣಾ ಶೌರ್ಯ ಘಟPವು ನಿಸರ್ಗ ವಿಕೋಪ, ಪ್ರವಾಹ, ಆಕಸ್ಮಿಕ ಬೆಂಕಿ, ಅನಾಹುತದಿಂದ ರಕ್ಷಣೆ ಮಾಡುವ ಕಾರ್ಯಗಳನ್ನು ಯಾವುದೇ ಫಲಾಪೇಕ್ಷೆವಿಲ್ಲದೆ ಕಾರ್ಯನಿರ್ವಹಿಸುತ್ತಿರುವದಕ್ಕೆ ನಮ್ಮ ಘಟಕದ ಸಮಿತಿಯಲ್ಲಿ ಪುರುಷ ಹಾಗೂ ಮಹಿಳೆಯರು ಸೇರಿದಂತೆ 19 ಜನರು ಸದಸ್ಯರಿಗೆ ತೃಪ್ತಿಯಿದೆ ಎಂದರು.

ಘಟಕ್ ಮುಖ್ಯ ಮಾಸ್ಟರ್ ಹೈದರಲಿ ಮಾತನಾಡಿ ಧರ್ಮಸ್ಥಳ ಟ್ರಸ್ಟವತಿಯಂದ ನಮಗೆ ಸೂಕ್ತ ತರಬೇತಿ ಸುರಕ್ಷಾ ಕಿಟ್ ಗಳನ್ನು ನಿರ್ವಹಣಾ ಸಮಿತಿಗೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಎಂದರು
ಶಾಲೆಯ ಪ್ರಧಾನ ಗುರು ಎಸ್ ಇಂಗಳೆ, ಮೇಲ್ವಿಚಾರಕ ಸತೀಶ ಎಮ್ ಹಾಗೂ ಸ್ವಯಂ ಸೇವಕರು ಭಾಗಿಯಾಗಿದ್ದರು.