Belagavi News In Kannada | News Belgaum

ಸಿರಿಧಾನ್ಯದ ಆಹಾರ ಸೇವಿಸಿ ಆಯುಷ್ಯ ಹೆಚ್ಚಿಸಿಕೊಳ್ಳಿ : ಮುತ್ನಾಳ

ಬೈಲಹೊಂಗಲ- ಪೌಷ್ಟಿಕತೆಯುಳ್ಳ ಆಹಾರಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಂಡು ಆಯುಷ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆಂದು ತಾಲೂಕಾ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್,ಮುತ್ನಾಳ ಹೇಳಿದರು.

ಅವರು ಪಟ್ಟಣದ ಚನ್ನಮ್ಮ ನಗರದ ಉಪ ಬಡಾವಣೆಯಲ್ಲಿರುವ ಶ್ರೀ ದಾನಮ್ಮದೇವಿ ದೇವಸ್ಥಾನಲ್ಲಿ ತಾಲೂಕಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಹಾಗೂ ಜ್ಞಾನ ವಿಕಾಸ ಸಮನ್ವಯ ಕೇಂದ್ರದ ಆಶ್ರಯದಲ್ಲಿ ಬುಧವಾರ ನಡೆದ ಪೌಷ್ಟಿಕ ಸಿರಿಧಾನ್ಯ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಪ್ರಸ್ತುತ

ದಿನಮಾನಗಳಲ್ಲಿ ಪ್ರತಿಷ್ಠೆಯ ನೆಪದಲ್ಲಿ ಜಂಕ್ ಪುಡ್‍ಗಳಿಗೆ, ಕಲಬೆರೆಕೆ ಆಹಾರಕ್ಕೆ ಜನರು ಮಾರುಹೋಗಿ ತಮ್ಮ ಆರೋಗ್ಯವನ್ನೇ ಹಾಳು ಮಾಡಿಕೊಂಡು ಆನಾರೋಗ್ಯಕ್ಕೆ ಒಳಗಾಗುತ್ತಿರುವದು ದುರ್ದೈವ. ಸಾವಯವ ಆಹಾರ ಪದ್ಧತಿ ಅನುಕರಿಸಿ ಸುಖವಾಗಿ ಬಾಳಲು ಕರೆ ಕೊಟ್ಟರು.

ತಾಲೂಕಾ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಪಿ.ವಿಜಯಕುಮಾರ ಸಿರಿಧಾನ್ಯದ ಕುರಿತು ತಿಳುವಳಿಕೆ ಮೂಡಿಸಿದರು. ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷ್ಯೆ ಹಾಗೂ ಪುರಸಭೆ ಸದಸ್ಯ ಹೇಮಲತಾ ಹಿರೇಮಠ, ಪುರಸಭೆ ಸದಸ್ಯ ವಾಣಿ ಪತ್ತಾರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕಪ್ಪನವರ, ನ್ಯಾಯವಾದಿ ವಿಜಯ ಪತ್ತಾರ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ

ರಾಜಗೋಳಿ, ಸೇವಾ ಪ್ರತಿನಿಧಿ ರೂಪಾ ಮೋಖಾಶಿ, ವೀಣಾ ಶಿವಸಂಗಯ್ಯನವರಮಠ, ವಿಜಯಲಕ್ಷ್ಮೀ ದೊಡಮನಿ, ಸಂಸ್ಥೆಯ ಮೇಲ್ವಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಭಾಗ್ಯಶ್ರೀ ಬೆಣಚಿನಮರ್ಡಿ ಸ್ವಾಗತಿಸಿ, ನಿರೂಪಿಸಿದರು.

ಕ್ಷಮಾ, ಅನ್ನಪೂರ್ಣ, ಮರೆಮ್ಮದೇವಿ, ನೇತ್ರಾವತಿ, ಕಮಕಾಂಬರಿ ಮುಂತಾದ ಸ್ವಸಹಾಯ ಸಂಘಗಳ ಸದಸ್ಯರು ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡು ತಮ್ಮ ಸಿರಿ ಉತ್ಪನ್ನಗಳನ್ನು ಪ್ರದರ್ಶಿಸಿದರು.