ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಬಿ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಹುಕ್ಕೇರಿ; ಗ್ರಾಮಿಣ ಪ್ರದೇಶದ ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಬಿ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಕ್ಯಾರುಗುಡ್ಡದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಅವರ ತಂದೆಯ ತಾಯಿ ಹೆಸರಿನ ವಿಶ್ವರಾಜ ಟ್ರಷ್ಟ ಮೂಲಕ ಮಹಾವಿದ್ಯಾಲಯಕ್ಕೆ ದೇಣಿಗೆ ನೀಡಿದ ಸುಮಾರು 3 ಲಕ್ಷರು ವೆಚ್ಚದಲ್ಲಿ ಸುಸಜ್ಜಿತ 60 ಗಣÀಕ ಯಂತ್ರ ( ಕಂಪ್ಯೂಟರ್ ) ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಸರಕಾರಗಳು ಉಚಿತ ಸೌಲಭ್ಯಗಳ ಬದಲಾಗಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಲ್ಲಿ ದೇಶಕ್ಕೆ ಉಜ್ವಲಭವಿಷ್ಯ. ಇಂದಿನ ಪರಿಸ್ಥಿತಿಯಲ್ಲಿ ತಮ್ಮ ಮಾತೃ ಭಾಷೆಯೊಂದಿಗೆ ದೇಶ ವಿದೇಶಗಳ ಸಂªಹÀನಕ್ಕೆ ಇಂಗ್ಲೀಷ ಕಲಿಕೆ ಅತಿ ಮುಖ್ಯವಾಗಿದೆ.
ಶಾಸಕ ಹಾಗೂ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ ಇಂದು ಕಂಪ್ಯೂಟರ ಬಳP ಯುಗ, ಕಾರಣ ಮಕ್ಕಳು ತಮ್ಮ ವ್ಯಾಸಂಗದ ಜೊತೆ ಕಂಪ್ಯೂಟರ ಜ್ಞಾನ ಪಡೆದುಕೊಳ್ಳಬೆಕೆಂದರು. ನಮ್ಮ ಮನೆತದ ವಿಶ್ವರಾಜ ಟ್ರಷ್ಟ ಮೂಲಕ ಅವಶ್ಯಕತೆವಿದ್ದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ನೀಡುವ ಚಿಂತನೆ ಇದೆ ಎಂದರು.
ಮಹಾವೀರ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಹಿರಾಶಗುರ ನಿರ್ದೇಶಕ ಬಸವರಾಜ ಮರಡಿ, ಕೆ.ಎಮ್ ಎಪ್ ನಿರ್ದೇಶಕ ರಾಯಪ್ಪ ಡೂಗ, ಸಮಿತಿ ಸದಸ್ಯ ರಾಜು ಮುನ್ನೋಳಿ,ಪ್ರೋ. ಪಿ.ಜಿ ಕೊಣ್ಣುರ, ಮುನಿರ ಕಳಾವಂತ, ರಮೇಶ ಹುಂಜಿ, ಬಸವೇಶ ಪಟ್ಟಣಶೆಟ್ಟಿ, ರಾಜು ಮೋಮಿನದಾದಾ, ಮತ್ತಿತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಈರಣ್ಣ ಭೂಸ್ಥಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಪಿ.ಜಿ ಕೊಣ್ಣುರ ಸ್ವಾಗತಿಸಿ ನಿರೂಪಿಸಿದರು.