ಅಧ್ಯಕ್ಷರಾಗಿ ಜಿ. ಆರ. ಪಾಟೀಲ, ಉಪಾಧ್ಯಕ್ಷರಾಗಿ ಮಹಾದೇವ ಕಿಲ್ಲೆದಾರ. ಆಯ್ಕೆ.

ಹುಕ್ಕೇರಿ; ತಾಲೂಕಿನ ಅಂಕಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಐದು ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನ್ಯಾಯವಾದಿ ಗಂಗಾಧರ ಪಾಟೀಲ ಅಧ್ಯಕ್ಷರಾಗಿ ಹಾಗೂ ಮಾಜಿ ಸೈನಿಕ ಮಹಾದೇವ ಕಿಲ್ಲೆದಾರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿಯ ನಿರ್ದೆಶಕರಾಗಿ ಶಶಿಕಾಂತ ಸೂರ್ಯವಂಶಿ, ಅಂಗದ ಜರಳಿ, ಕೇದಾರಿನಾಥ ಪವಾರ, ಬಾಳಕೃಷ್ಣ ಘಸ್ತಿ, ಅಕ್ಕಾತಾಯಿ, ಕೊಣೇರಿ, ಮಹಾದೇವಿ ಘೋಡಸೆ, ಕಲ್ಲಪ್ಪ ಪರೀಟ, ಅನೀಲ ಕೋಣಕೇರಿ, ಸಿದ್ದಲಿಂಗ ಸಾನೆ, ಭರತ ಪುಂಡೆ ಆಯ್ಕೆಯಾಗಿದ್ದಾರೆ.
* ಅಂಕಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಎರಡನೆ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರ ಪಾಟೀಲ ಮಾತನಾಡಿ ಬಿ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ಮಾರ್ಗದರ್ಶನಲ್ಲಿ ಸಂಘದ ಸದಸ್ಯರಿಗೆ ಸರಕಾರದ ಯೋಜನೆಗಳನ್ನು ತಲುಪಿಸಿ ಸಂಘದ ಅಭಿವೃದ್ದಿಗೆ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾರ್ಯನಿರ್ವಹಿಸುವದಾಗಿ ಹೇಳಿದರು. ಮುಖ್ಯ ಕಾರ್ಯನಿರ್ವಾಹಕಧಿಕಾರಿ ಸಂತೋಷ ಪುಂಡೆ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.