ಪ್ರಧಾನಿ ಮೋದಿ ಭಾಷಣಕ್ಕೆ ರಾಹುಲ್ ಗಾಂಧಿ ಅಸಮಾಧಾನ

ನವದೆಹಲಿ: ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೈಖರಿ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರ, ಅತ್ಯಾಚಾರ, ಹತ್ಯೆಗಳಿಂದ ಮಣಿಪುರ ತತ್ತರಿಸಿ ಹೋಗಿದೆ.
ಇತ್ತ ಪ್ರಧಾನಿ ಸಂಸತ್‍ನಲ್ಲಿ ನಗುತ್ತಾ, ಜೋಕ್‍ಗಳನ್ನು ಮಾಡಿಕೊಂಡಿದ್ದಾರೆ. ವಿಪಕ್ಷಗಳನ್ನು ಟೀಕಿಸುತ್ತಾ ನಿನಾದಗಳನ್ನು ಹೊರಡಿಸಿದ್ದಾರೆ. ಈ ಹಿಂದೆ ಎಷ್ಟೋ ಪ್ರಧಾನಿಗಳನ್ನು ನೋಡಿದ್ದೇವೆ. ಆದರೆ ಈ ಮಟ್ಟಕ್ಕೆ ಇಳಿದು ಮಾತಾಡಿದ ಪ್ರಧಾನಿಯನ್ನು ನಾನು ನೋಡಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಗಳು ಮಾತಾಡಿದ ರೀತಿ ನೋವು ತಂದಿದೆ. ಪ್ರಧಾನಿ 2 ಗಂಟೆ 13 ನಿಮಿಷಗಳ ಭಾಷಣ ಮಾಡಿದ್ದಾರೆ. ಆದರೆ ಅದರಲ್ಲಿ ಮಣಿಪುರದ ಬಗ್ಗೆ ಪ್ರಸ್ತಾಪ ಇದ್ದಿದ್ದು ಕೇವಲ 2 ನಿಮಿಷ ಮಾತ್ರ. ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರಧಾನಿ ಮರೆತಂತಿದೆ ಎಂದು ಕಿಡಿಕಾರಿದ್ದಾರೆ..//////