Belagavi News In Kannada | News Belgaum

ಹುಬ್ಬಳ್ಳಿ/ಧಾರವಾಡರಫ್ತುದಾರರ ಬೆಂಬಲಿಸಲುಅಭಿಯಾನ

ಹುಬ್ಬಳ್ಳಿ:ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯಾಗಿರುವಬೆಂಗಳೂರು ಮೂಲದ ನವಟೈಸ್ ಸಂಸ್ಥೆಭಾರತದಲ್ಲಿ `ನೀವು ರಫ್ತು ಮಾಡಲು ಸಿದ್ಧರಿದ್ದೀರಾ?’ಎನ್ನುವಅಭಿಯಾನ ಪ್ರಾರಂಭಿಸಿದೆ.ದೇಶದಲ್ಲಿಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳ ರಫ್ತು ಸಿದ್ಧತೆ ನಿರ್ಣಯಿಸಲು ಸಮಗ್ರ ಮೌಲ್ಯಮಾಪನ ಸಾಧನವನ್ನು ಒಳಗೊಂಡಿರುವುದು ಈ ಅಭಿಯಾನದ ಪ್ರಮುಖಉದ್ದೇಶವಾಗಿದೆ. ಸಂಪೂರ್ಣಉಚಿತ ಮೌಲ್ಯಮಾಪನದ ಮೂಲಕ ದೇಶದ1 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳನ್ನು ರಫ್ತುದಾರರನ್ನಾಗಿ ಮಾಡುವುದು ನವಟೈಸ್‍ಗುರಿಯಾಗಿದೆ. ಈ ಹಿನ್ನೆಲೆಯಲ್ಲಿಹುಬ್ಬಳ್ಳಿಯಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಕಚೇರಿಯಲ್ಲಿಹುಬ್ಬಳ್ಳಿ/ಧಾರವಾಡ ಮತ್ತುಉತ್ತರಕರ್ನಾಟಕರಫ್ತುದಾರರನ್ನು ಬೆಂಬಲಿಸಲುರಫ್ತುಅಭಿಯಾನ ಪ್ರಾರಂಭಿಸಲಾಯಿತು.
ನೀವು ರಫ್ತಿಗೆ ಸಿದ್ಧರಿದ್ದೀರಾ?ಅಭಿಯಾನವು ಭಾರತೀಯ ವ್ಯವಹಾರಗಳಿಗೆ ತಮ್ಮರಫ್ತು ಸಿದ್ಧತೆಯನ್ನು 36- ಅಂಶಗಳಲ್ಲಿ ಮೌಲ್ಯಮಾಪನ ಮಾಡಲು ಅವಕಾಶ ನೀಡುತ್ತದೆ. ಮುಖ್ಯವಾಗಿ ನಿಯಂತ್ರಕಅನುಸರಣೆ, ದಸ್ತಾವೇಜು, ಪ್ರಮಾಣೀಕರಣ, ಸಾಮಥ್ರ್ಯ ನಿರ್ಮಾಣ, ಲಾಜಿಸ್ಟಿಕ್ಸ್, ಹಣಕಾಸಿನ ಲಭ್ಯತೆ, ಮಾರುಕಟ್ಟೆ, ಮತ್ತುಇತರ ಸಂಪನ್ಮೂಲಗಳನ್ನು ಸೇರಿದಂತೆರಫ್ತು ಮಾಡುವಎಲ್ಲಾ ಅಂಶಗಳನ್ನು ಒಳಗೊಂಡಿದೆ. ಮೌಲ್ಯಮಾಪನ ಸಾಧನವು ವ್ಯಾಪಾರಿಗಳಿಗೆ ತಮ್ಮರಫ್ತು ಸಾಮಥ್ರ್ಯಗಳನ್ನು ಹೆಚ್ಚಿಸಲು ಮತ್ತುರಫ್ತು ಸಿದ್ಧತೆಯ ಮಾರ್ಗಸೂಚಿಒದಗಿಸುತ್ತದೆ.
ಹೊಸ ರಫ್ತುದಾರರು, ಉತ್ಪಾದಕರು, ವ್ಯಾಪಾರಿಗಳು, ಸೇವಾ ಪೂರೈಕೆದಾರರು, ಎಫ್‍ಪಿಒಗಳು, ರೈತರು ಮತ್ತುಅಂತಾರಾಷ್ಟ್ರೀಯ ವ್ಯಾಪಾರವನ್ನುಅನ್ವೇಷಿಸಲು ಬಯಸುವಇತರಆಸಕ್ತರು079-4105-0727ಗೆಮಿಸ್ಡ್‍ಕಾಲ್ ನೀಡುವ ಮೂಲಕ ಈ ಅಭಿಯಾನಕ್ಕೆ ನೋಂದಾಯಿಸಿಕೊಳ್ಳಬಹುದು.
ಈ ಕುರಿತು ಮಾತನಾಡಿದಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿಯವರು ‘2022-23ರಲ್ಲಿ ಹುಬ್ಬಳ್ಳಿ-ಧಾರವಾಡ ಸುಮಾರು1400 ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಪ್ರಾಥಮಿಕ ಸರಕು ರಫ್ತುಗಳು ಆಟೋಮೊಬೈಲ್ ಭಾಗಗಳು, ಸಂಸ್ಕರಿಸಿದ ಆಹಾರ, ಗ್ರಾನೈಟ್, ಹತ್ತಿ ಇತ್ಯಾದಿಗಳಾಗಿವೆ. ಅದಲ್ಲದೆ ನಾವು ತರಕಾರಿಗಳು, ಹಣ್ಣುಗಳು, ಮಸಾಲೆಗಳು ಮತ್ತು ಜವಳಿ ಮುಂತಾದ ಪದಾರ್ಥಗಳನ್ನು ರಫ್ತು ಮಾಡಲು ಅವಕಾಶಗಳನ್ನು ಹೊಂದಿದ್ದೇವೆ. ಕಳೆದ ವರ್ಷಉತ್ತರಕರ್ನಾಟಕ ಭಾಗವು ಸುಮಾರು21,000 ಕೋಟಿಗಳಷ್ಟು (ರಾಜ್ಯರಫ್ತಿನ9.5% ಭಾಗ) ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಅದರಲ್ಲಿ ಸಕ್ಕರೆ, ಮೆಕ್ಕೆಜೋಳ, ಮಸಾಲೆಗಳು, ಗ್ರಾನೈಟ್, ತರಕಾರಿಗಳು, ಹಣ್ಣುಗಳು, ಹತ್ತಿ, ರಾಸಾಯನಿಕಗಳು, ಕಬ್ಬಿಣದ ರಾಡ್‍ಗಳು, ಆಟೋ ಮತ್ತುಏರೋ ಭಾಗಗಳು ಮುಂತಾದವುಅಗ್ರಸ್ಥಾನದಲ್ಲಿದೆ. ಇನ್ನು ಹೆಚ್ಚಿನ ಸರಕುಗಳನ್ನು ರಫ್ತು ಮಾಡುವ ಸಾಮಥ್ರ್ಯವನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನವಟೈಸ್ ಸಂಸ್ಥೆಯುನೀವು ರಫ್ತು ಮಾಡಲು ಸಿದ್ಧರಿದ್ದೀರಾ?ಕಾರ್ಯಕ್ರಮದ ಮೂಲಕ ಹೊಸ ರಫ್ತುದಾರರನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡುತ್ತಿವೆ. ದಾಖಲಾತಿಗಳು, ಖರೀದಿ ನಿರ್ವಹಣೆ, ಸಾಗಣೆ ಮತ್ತು ಪಾವತಿಗಳನ್ನು ನಿರ್ವಹಿಸಲು ರಫ್ತುದಾರರಿಗೆ ಬೇಕಿರುವಅಗತ್ಯ ನೆರವನ್ನುಇದರಡಿ ನೀಡಲಾಗುತ್ತದೆ. ಈ ಅಭಿಯಾನದಲ್ಲಿಅವರನ್ನು ಬೆಂಬಲಿಸಲು ನಾವು ಸಹಕರಿಸುವೆವು’ಎಂದರು.
ಈ ಕುರಿತು ಮಾಹಿತಿ ನೀಡಿದನವಟೈಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಸತೀಶ್‍ಕೋಟ,‘ರಫ್ತು ಭಾರತದಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ ಮತ್ತು ಹೊಸ ವಿದೇಶಿ ವ್ಯಾಪಾರ ನೀತಿ 2023 ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಅನೇಕ ಹೊಸ ಮಾರ್ಗಗಳನ್ನು ನೀಡುತ್ತದೆ. ದೇಶದಲ್ಲಿರುವ 6.3 ಕೋಟಿ ಸಣ್ಣ ಕೈಗಾರಿಕೆಗಳಲ್ಲಿ ಶೇ. 1ರಷ್ಟು ಮಾತ್ರರಫ್ತುದಾರರಾಗಿದ್ದಾರೆ. ಆದ್ದರಿಂದದೇಶದರಫ್ತುಉದ್ಯಮಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಾವು ಸ್ಥಳೀಯ ವ್ಯಾಪಾರಿಗಳು ತಮ್ಮ ದೇಶೀಯ ಮಾರುಕಟ್ಟೆಯನ್ನು ಮೀರಿ ವ್ಯಾಪ್ತಿ ವಿಸ್ತರಣೆಯಲ್ಲಿ ತೊಡಗಿಕೊಳ್ಳುವುದನ್ನು ಬೆಂಬಲಿಸಲು ಬಯಸುತ್ತೇವೆ. 1ಲಕ್ಷ ವ್ಯವಹಾರಗಳಿಗೆ ರಫ್ತು ವಿಚಾರದಲ್ಲಿ ಸುಧಾರಣೆಗಳನ್ನು ಗುರುತಿಸಲು, ಅವರಿಗೆಅಗತ್ಯವಿರುವ ಪರಿಕರ, ಸಂಪನ್ಮೂಲಗಳನ್ನು ಒದಗಿಸಲು ಮತ್ತು ಯಶಸ್ವಿ ರಫ್ತುದಾರರಾಗಲುತಜ್ಞರನ್ನು ಸಂಪರ್ಕಿಸಲು ಸಹಾಯ ಮಾಡುವಉದ್ದೇಶದೊಂದಿಗೆ ನೀವು ರಫ್ತು ಮಾಡಲು ಸಿದ್ಧರಿದ್ದೀರಾ? ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ’ ಎಂದರು.