Belagavi News In Kannada | News Belgaum

ವಿದ್ಯುತ್ ತಗುಲಿ ಯುವಕ ಸಾವು

ಬೆಳಗಾವಿ: ವಿದ್ಯುತ್ ಲೈನ್ ದುರಸ್ತಿ ವೇಳೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಚಿಕ್ಕೋಡಿ ಪಟ್ಟಣದ ಹೊಸಪೇಟ ಗಲ್ಲಿಯಲ್ಲಿ ನಡೆದಿದೆ..

 

ಪಟ್ಟಣದ ದೇದರಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಮೃತ ವ್ಯಕ್ತಿ. ಹೆಸ್ಕಾಂ ಸಿಬ್ಬಂದಿ ಕೆಳಗೆ ನಿಂತು ಸಿದ್ದರಾಮ ಕುಪವಾಡೆ ಎಂಬಾತನನ್ನು ವಿದ್ಯುತ್ ಕಂಬದ ಮೇಲೇರಿಸಿದ್ದ..

 

ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಆತ ಮೃತಪಟ್ಟಿದ್ದಾನೆ. ಮೃತ ಸಿದ್ದರಾಮ ಕುಪವಾಡೆ ಹೆಸ್ಕಾಂ ಗುತ್ತಿಗೆ ನೌಕರ ಅಲ್ಲ, ಖಾಸಗಿ ವ್ಯಕ್ತಿ ಎಂದು ಚಿಕ್ಕೋಡಿ ಹೆಸ್ಕಾಂ ಸೆಕ್ಷನ್ ಆಫೀಸರ್ ರಾಜು ಕುಂಬಾರ ತಿಳಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಗಾಇದೆ.