ಅಸಮಾನತೆ ತೊಲಗಿದರೆ ದೇಶದ ಅಭಿವೃದ್ಧಿ ಸಾಧ್ಯ: ಡಾ. ತಳವಾರ

ಬೆಳಗಾವಿ: ದಿ. 14 ರಂದು ಧಾರವಾಡದ ಸಿಎಮ್‌ಡಿಅರ್ ಬಹು ಶಾಸ್ತ್ರೀಯ ವಿಕಾಸ ಸಂಶೋದನಾ ಕೇಂದ್ರದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ತಳವಾರ ಸಾಬಣ್ಣಾರವರು, ಅಂಬೇಡ್ಕರ್‌ರವರು ಮಹಾನ ಮಾನವತಾವಾದಿ, ಸಾಮಾಜಿಕ ತಜ್ಞ, ಶಿಕ್ಷಣ ತಜ್ಞ ಮತ್ತು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಆಗಿದ್ದರು.
ಅವರ ಆರ್ಥಿಕ ಚಿಂತನೆಗಳನ್ನು ಜಾರಿಗೆ ತಂದರೆ ಸಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿನ ಮೇಲೂ – ಕೀಳು, ಸ್ಪ್ರಶ್ಯ – ಅಸ್ಪ್ರಶ್ಯ, ಅಸಮಾನತೆ, ಬಡತನ, ಶ್ರಮಿಕರ ವಿಭಜನೆ ಇವೆಲ್ಲ ಭಾರತ ಆರ್ಥಿಕ ದುಸ್ಥಿತಿಗೆ ಕಾರಣ. ಇದನ್ನು ನಿರ್ಮೂಲನೆ ಮಾಡಿದಾಗ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಭೂ ಹಿಡುವಳಿ ಸುಧಾರಣೆ, ಹಳೆಯ ವ್ಯವಸಾಯ ಪದ್ಧತಿ ಆಧುನೀಕರಣಗೊಳಿಸುವುದು, ನದಿಗಳ ಜೋಡಣೆ, ಹಣಕಾಸು ವ್ಯವಸ್ಥೆ ಇವುಗಳ ಅನುಷ್ಠಾನದಿಂದ ಮಾತ್ರ ಭಾರತದ ಆರ್ಥಿಕ ಅಭಿವೃದ್ದಿ ಸಾಧ್ಯ ಎಂದು ಡಾ.ಬಿ.ಆರ್. ಅಂಬೇಡ್ಕರ ಅವರ ಚಿಂತನೆ ಆಗಿತ್ತು ಎಂದು ಡಾ.ತಳವಾರ ಸಾಬಣ್ಣಾರವರು ತಿಳಿಸಿದರು.