Belagavi News In Kannada | News Belgaum

ಕರ್ನಾಟಕ ರಾಜ್ಯದ ಅತ್ಯುತ್ತಮ ಪ್ರೊಜೆಕ್ಟ ಪ್ರಶಸ್ತಿ

ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ

 

ಕರ್ನಾಟಕ ರಾಜ್ಯದ ಅತ್ಯುತ್ತಮ ಪ್ರೊಜೆಕ್ಟ ಪ್ರಶಸ್ತಿ

ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿ ಶ್ರೀಧರ ಉಳ್ಳಾಗಡ್ಡಿ ಮಂಡಿಸಿದ “ಪ್ರೊಜೆಕ್ಟ ಸ್ಟಡಿ ಆನ್ ರಿಕವರಿ ಆಫ್ ವ್ಯಾಕ್ಸ ಫ್ರಾಮ್ ಶುಗರಕೇನ್ ಇಂಡಸ್ಟ್ರೀಸ್ ಪ್ರೆಸ್‍ಮಡ್ ಫಾರ ದ ಇಂಪ್ರೂವ್‍ಮೆಂಟ್ ಆಫ್ ಅಗ್ರಿಕಲ್ಚರಲ್ ಸಾಯಿಲ್ ಫರ್ಟಿಲಿಟಿ” ಗೆ 46 ನೇ ವಿದ್ಯಾರ್ಥಿಗಳ ಪ್ರೊಜೆಕ್ಟ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ ಸಾಯಿನ್ಸ ಆ್ಯಂಡ್ ಟೆಕ್ನಾಲಜಿ ಅವರು ಸಂಯೋಜಿಸಿದ ರಾಜ್ಯಮಟ್ಟದ ಸ್ಪರ್ಧಾತ್ಮಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ-2022-23 ಲಭಿಸಿದೆ. ಪ್ರಶಸ್ತಿ ಸಮಾರಂಭವು ಮೂಡಬಿದಿರೆಯ ಆಳ್ವಾ ಕಾಲೇಜಿನಲ್ಲಿ ನೆರವೇರಿತು.

ವಿದ್ಯಾರ್ಥಿಯ ಈ ಸಾಧನೆಗೆ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಸುರೇಶ ಅಂಗಡಿ, ನಿರ್ದೇಶಕಿ ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥ ಕಿರಣ ಕೋರಡ್ಡಿ, ವಿದ್ಯಾರ್ಥಿಯ ಮಾರ್ಗದರ್ಶಕ ಡಾ. ಬಿ.ಟಿ. ಸುರೇಶ ಬಾಬು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೋಟೊ ಶಿರ್ಷಿಕೆ: ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬೆಳಗಾವಿ ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿ ಶ್ರೀಧರ ಉಳ್ಳಾಗಡ್ಡಿಯೊಂದಿಗೆ, ಸಂಸ್ಥೆಯ ನಿರ್ದೇಶಕಿ ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥ ಕಿರಣ ಕೋರಡ್ಡಿ, ವಿದ್ಯಾರ್ಥಿಯ ಮಾರ್ಗದರ್ಶಕ ಡಾ. ಬಿ.ಟಿ. ಸುರೇಶ ಬಾಬು ಇದ್ದಾರೆ.