ಸ್ವಚ್ಛತಾ ಕಾರ್ಯದಲ್ಲಿ ನಿರ್ಲಕ್ಷ: ಗುತ್ತಿಗೆದಾರರಿಗೆ ದಂಡ ವಿಧಿಸಲು ಸೂಚನೆ

ಸ್ವಚ್ಛತಾ ಕಾರ್ಯದಲ್ಲಿ ನಿರ್ಲಕ್ಷ: ಗುತ್ತಿಗೆದಾರರಿಗೆ ದಂಡ ವಿಧಿಸಲು ಸೂಚನೆ
ಬೆಳಗಾವಿ, ಆ.14 : ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ಅಗಸ್ಟ್.14 2023 ರಂದು ನಸುಕಿನಜಾವ ಪಾಲಿಕೆಯ ವಾಹನಗಳ ಗ್ಯಾರೇಜ್‍ಗಳಿಗೆ ಭೇಟಿ ನೀಡಿದರು.
ಮಹಾಂತೇಶ ನಗರದ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಬಳಿಕ ಹಳೆ ಮತ್ತು ಹೊಸ ಗಾಂಧಿ ನಗರದ ವಾರ್ಡ್ ಕಾಪೆರ್Çೀರೇಟರ್ ಅಜೀಂ ಪಟ್ವೇಕರ ಜೊತೆ ಆಲ್ಲಿಯ ಸ್ವಚ್ಛತೆ ಹಾಗೂ ನಾಲಾಗಳ ಪರಿಶೀಲನೆ ನಡೆಸಿ ಸರಿಯಾಗಿ ಸ್ವಚ್ಛತೆ ಕೆಲಸ ನಿರ್ವಹಿಸದೆ ಇರುವ ಗುತ್ತಿಗೆದಾರರಿಗೆ ದಂಡ ಹಾಕಿ ಅದರ ಜೊತೆಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲಾ ವಾಹನ ಚಾಲಕರು, ಬೀಟ್ ಕಚೇರಿ ಪೌರಕಾರ್ಮಿಕರ ಜೊತೆ ರಾಷ್ಟ್ರ ದ್ವಜದೊಂದಿಗೆ ಸೆಲ್ಫಿ ಪೆÇೀಟೊ ತೆಗೆಸಿಕೊಂಡರು ನಂತರ ಕೋಟೆ ಕೆರೆಗೆ ಭೇಟಿ ನೀಡಿ ಕೋಟೆ ಕೆರೆಯ ಆವರಣದಲ್ಲಿ 75 ಔಷಧಿಯ ಸಸ್ಯಗಳನ್ನು ನೆಡುವ ಜಾಗದ ಬಗ್ಗೆ ಪರಿಶೀಲನೆ ನಡೆಸಿದರು.
ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ವಾಹನ ಚಾಲಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.///
ಯಂತ್ರಚಾಲಿತ ದ್ವಿ ಚಕ್ರ ವಾಹನ ಸೌಲಭ್ಯಕ್ಕಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ
ಬೆಳಗಾವಿ, ಆ.14: 2022-23 ನೇ ಸಾಲಿಗೆ ಇಲಾಖೆಯ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಹೆಚ್ಚುವರಿ ಮತ್ತು ಉಳಿಕೆ ಇರುವ ಯಂತ್ರಚಾಲಿತ ದ್ವಿಚಕ್ರ ವಾಹನ ಸೌಲಭ್ಯಕ್ಕಾಗಿ ಜಿಲ್ಲೆಯ ದೈಹಿಕ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಕಲಚೇತನರು ಶೇಕಡಾ 75 ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರಬೇಕು. ಕನಿಷ್ಠ 20 ವರ್ಷ ಗರಿಷ್ಠ 60 ವರ್ಷ ವಯೋಮಿತಿಯೊಳಗಿರಬೇಕು.
ಲಗತ್ತಿಸಬೇಕಾದ ದಾಖಲಾತಿಗಳು:
ವಿಕಲಚೇತನರಯು.ಡಿ.ಐ.ಡಿ. ಕಾರ್ಡ (75% ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರತಕ್ಕದ್ದು), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ವಾಹನ ಚಾಲನಾ ಪ್ರಮಾಣ ಪತ್ರ. (ಎಲ್.ಎಲ್.ಆರ್.) ಆದಾಯ ಮತ್ತುಜಾತಿ ಪ್ರಮಾಣ ಪತ್ರ, ವಯಸ್ಸಿನ ದಾಖಲಾತಿ, ಸ್ವಂತ ಉದ್ಯೋಗ/ಖಾಸಗಿ ನೌಕರಿ/ಶಿಕ್ಷಣದ ಬಗ್ಗೆ ದೃಢೀಕರಣ, ಸದರಿ ಸೌಲಭ್ಯವನ್ನು ಯಾವುದೇ ಮೂಲದಿಂದ ಪಡೆದಿರುವುದಿಲ್ಲವೆಂಬ ದೃಢೀಕರಣ ಸಲ್ಲಿಸಬೇಕು.
ಜಿಲ್ಲೆಯ ದೈಹಿಕ ವಿಕಲಚೇತನರು ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿ ಪ್ರತಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅಗಸ್ಟ್.31 2023 ರ ವರೆಗೆ ಸಲ್ಲಿಸಬಹುದಾಗಿದೆ.
ತಡವಾಗಿ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: 0831-2476097 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲಾ ್ಲಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ವಿಕಲಚೇತನರು ಯು.ಡಿ.ಐ.ಡಿ.ಕಾರ್ಡ ಪಡೆಯಲು ಸೂಚನೆ
ಬೆಳಗಾವಿ, ಆ.14 : “ವಿಕಲಚೇತನರ ಮನೆ ಬಾಗಿಲಿಗೆ ಯು.ಡಿ.ಐ.ಡಿ. ಕಾರ್ಡ” ಎಂಬ ಘೋಷವಾಕ್ಯದಡಿ ಆಗಸ್ಟ್ ತಿಂಗಳನ್ನು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ವಿಕಲಚೇತನರು ಯು.ಡಿ.ಐ.ಡಿ. ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿ ಬಹಳ ದಿನಗಳು/ತಿಂಗಳು/ವರ್ಷಗಳು ಮೀರಿದ್ದರು ಇಲ್ಲಿಯವರೆಗೆ ತಮ್ಮ ತಾಲೂಕಿನ ಅಥವಾ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಮಂಡಳಿಯಲ್ಲಿ ತಮ್ಮ ಯು.ಡಿ.ಐ.ಡಿ. ಕಾರ್ಡ ಅನುಮೋದನೆ ಪಡೆಯದೆ ಇರುವ ವಿಕಲಚೇತನರು ಆಗಸ್ಟ.31 ರ ವರೆಗೆ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಿ ಕಡ್ಡಾಯವಾಗಿ ತಮ್ಮ ಯು.ಡಿ.ಐ.ಡಿ. ಕಾರ್ಡ ಅನುಮೋದಿಸಿಕೊಳ್ಳಬಹುದಾಗಿದೆ.
ತಪ್ಪಿದಲ್ಲಿ ತಮ್ಮ ಅರ್ಜಿಯನ್ನು ವಿಲೆಗೆ ಹಾಕಲಾಗುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಆ.20 ರಂದು ದಿ. ಡಾ.ಡಿ.ಸಿ.ಪಾವಟೆ ಅವರ ಸಾಧನಾ ಕಾರ್ಯಕ್ರಮ
ಬೆಳಗಾವಿ, ಆ.14 : ಬೆಳಗಾವಿಯ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಕನ್ನಡ ಸಾಂಸ್ಕೃತಿಕ ಭವನಡ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ (ಆ.20) 2023 ಸಮಯ ಬೆಳಿಗ್ಗೆ 10 30 ಗಂಟೆಗೆ ನೆಹರು ನಗರ, ರಾಮದೇವ ಹೊಟೇಲ್ ಹಿಂದೆ ಇರುವ ಕನ್ನಡ ಭವನದಲ್ಲಿ ದಿ ಡಾ.ಡಿ.ಸಿ.ಪಾವಟೆ ಅವರ ಸಾಧನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಜಿಲ್ಲಾಧ್ಯಕ್ಷರು ಕಸಾಪ ಮಂಗಲಾ ಮೆಟಗುಡ್ಡ , ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ. ಚ.ಕಿತ್ತೂರು ನಿ.ಪೂರ್ವ ಕಸಾಪ ತಾ.ಘ. ಅಧ್ಯಕ್ಷರಾದ ಡಾ. ಸೋಮಶೇಖರ ಹಲಸಗಿ ಅವರು ಉಪನ್ಯಾಸ ನೀಡಲಿದ್ದಾರೆ.ಬೆಳಗಾವಿಯ ಹಿರಿಯ ಸಾಹಿತಿಗಳಾದ ಶಿವಯೋಗಿ ಕುಸಗಲ್ ಅವರು ಕಾರ್ಯಕ್ರಮ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಬೆಳಗಾವಿ ಜಿಲ್ಲೆ ಗೌರವ ಕಾರ್ಯದರ್ಶಿ ಕಸಾಪ ಎಮ್ ವೈ ಮೆಣಸಿನಕಾಯಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.
ಬೆಳಗಾವಿ ಜಿಲ್ಲೆಯ ಕ.ಸಾ.ಪ. ಎಲ್ಲ ತಾಲೂಕಾ ಅಧ್ಯಕ್ಷರುಗಳು, ಹಾಗೂ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು, ಕ.ಸಾ.ಪ. ಸರ್ವಸದಸ್ಯರು,ಸಾಹಿತಿಗಳು,ಕಲಾವಿದರು, ಸಮಸ್ತ ಕನ್ನಡ ಮನಸ್ಸುಗಳು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರು ಕಾರ್ಯಕರ್ಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.///
ಬೆಳಗಾವಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ: ಮಿನಿ ಉದ್ಯೋಗ ಮೇಳ
ಬೆಳಗಾವಿ, ಆ.14: ಬೆಳಗಾವಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಆ.18 2023 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ, SSLC, ITI, DIPLOMA, PUC, Any Degree (Bsc,BE in CS, BE in E&E,E&C) PG (MBA, MSC, MCA)ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಮಿನಿ ಉದ್ಯೋಗಮೇಳವನ್ನು ಬೆಳಗಾವಿ ನಗರದ ಶಿವಬಸವ ನಗರದಲ್ಲಿರುವ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜನಲ್ಲಿ ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು https://forms.gle/sVEUdBNPrV8LV1k3A F ಈ ವೆಬ್‍ಸೈಟ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ,
ಹೆಚ್ಚಿನ ಮಾಹಿತಿಗಳಿಗಾಗಿ ಮೊ. ಸಂಖ್ಯೆ: 8147685479 ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ, ಆ.14 : ತಾಂತ್ರಿಕ ತರಬೇತಿ ಸಂಸ್ಥೆ ಎಚ್‍ಎಎಲ್ (ಬೆಂ.ಸಂ) ಬೆಂಗಳೂರು ಮೂಲದ ಎಚ್‍ಎಎಲ್ ವಿಭಾಗದಲ್ಲಿ 1060 ಸ್ಥಾನಗಳ ಪೈಕಿ ನಿಯೋಜಿತ ಟ್ರೇಡ್ ಗಳಲ್ಲಿ ಅಪ್ರೆಂಟಿಸ್‍ಷಿಪ್ ತರಬೇತಿಗಾಗಿ ಎಕ್ಸ್ ಐಟಿಐ ಅಭ್ಯರ್ಥಿಗಳಿಂದ ಸಿಟಿಎಸ್ ಉತ್ತೀರ್ಣ ಅಭ್ಯರ್ಥಿಗಳು ಅರ್ಜಿಗಳನ್ನು ಆಹ್ವಾನಿಸಿದೆ.
ಕಾರಣ ಐಟಿಐನಲ್ಲಿ ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, LnL , ಫೌಂಡ್ರಿ-ಮ್ಯಾನ್ ಮತ್ತು ಶೀಟ್ ಮೆಟಲ್ ವರ್ಕರ್ ಟ್ರೇಡ್ ಗಳಲ್ಲಿ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಐಟಿಐಗಳಿಂದ ಕ್ರಾಪ್ಟ್ಸ್ ಮೆನ್ ಟ್ರೈನಿಂಗ್ ಸ್ಕೀಮ್ LnL ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಆ.25 2023 ರ ಒಳಗಾಗಿ ಅಥವಾ ಎಚ್‍ಎಎಲ್‍ವೆಬ್ ಸೈಟ್ www.hal-india.co.in ಕೆರಿಯರ್ ಕಾಲಂನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು ಆ. 31 2023ರ ಒಳಗಾಗಿ ನೇರವಾಗಿ ಅರ್ಜಿಗಳನ್ನು ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಸುರಂಜನ್ ದಾಸ್ ರಸ್ತೆ ವಿಮಾನಪುರ ಅಂಚೆ ಬೆಂಗಳೂರು 560017 ವಿಳಾಸಕ್ಕೆ ಸಲ್ಲಿಸಬಹುದ್ದಾಗಿದೆ ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.///
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ, ಆ.14 : ಪ್ರತಿ ವರ್ಷ ಅಸಾಧಾರಣ ಶೌರ್ಯ, ಅಸಾಧಾರಣ ಸಾಮಾಥ್ರ್ಯವನ್ನು ಹೊಂದಿರುವ ಮತ್ತು ಕ್ರೀಡೆ, ಸಮಾಜ ಸೇವೆ, ವಿಜ್ಞಾನ, ತಂತ್ರಜ್ಞಾನ, ಪರಿಸರ, ಕಲೆ, ಮತ್ತು ಸಂಸ್ಕ್ರತಿ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 18 ವರ್ಷದೊಳಗಿನ ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೈಬ್‍ಸೈಟ್ https://awards.gov.in ನಲ್ಲಿ ಆ.31 2023 ರೊಳಗೆ ಅರ್ಜಿಗಳನ್ನು ಆಹ್ವಾನಿಸಿ ಪ್ರಸ್ತಾವನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, 18 ವರ್ಷದೊಳಗಿನ ಆಸಕ್ತರು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ಈ ಕಛೇರಿಗೆ ಒಂದು ಪ್ರತಿ ಸಲ್ಲಿಸಲು ತಿಳಿಸಿಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿ ನಗರ, 3ನೇ ಕ್ರಾಸ್, ಬೆಳಗಾವಿ ದೂರವಾಣಿ ಸಂಖ್ಯೆ:- 0831-2407235 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//
ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
ಬೆಳಗಾವಿ, ಆ.14 : ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕ ನಿಯಮಿತ, ವತಿಯಿಂದ ಸನ್ 2022 23 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90 ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 85 ಅಂತಿಮ ಪದವಿ, ಸ್ನಾತಕೋತ್ತರ ಪದವಿ ವೃತ್ತಿ ಶಿಕ್ಷಣ ಇಂಜನೀಯರಿಂಗ ವೈದ್ಯಕೀಯ ಶಿಕ್ಷಣ ಪರೀಕ್ಷೆಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕ ಪಡೆದು ಪಾಸಾದ ಹಾಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಮಾತ್ರ ಪ್ರತಿಭಾ ಪುರಸ್ಕಾರ ಸಹಾಯಧನ ನೀಡಲಾಗುವುದು.
ಇಚ್ಚೆಯುಳ್ಳ ಬ್ಯಾಂಕಿನ ಸದಸ್ಯರು ತಮ್ಮ ಮಕ್ಕಳು ಪಾಸಾದ ಪರೀಕ್ಷೆಯ ಅಂಕಪಟ್ಟಿಯ ದೃಢೀಕೃತ ಪ್ರತಿಯೊಂದಿಗೆ ಅಧ್ಯಕ್ಷರು ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕ ನಿಯಮಿತ, ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಆವರಣ ಇಲ್ಲಿಗೆ ಸೆ.15 2023 ರೊಳಗೆ ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗಾಗಿ ಮೋ. ಸಂಖ್ಯೆ 9448578466 ಗೆ ಸಂರ್ಪಕಿಸಬಹುದು ಎಂದು ವ್ಯವಸ್ಥಾಪಕರಾದ ಎನ್.ಎಸ್.ಜಾಧವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ////
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: “ಹೊಯ್ಸಳ” ಮತ್ತು “ಕೆಳದಿ ಚೆನ್ನಮ್ಮಾ” ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ, ಆ.14 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 2023-24ನೇ ಸಾಲಿಗಾಗಿ 6 ರಿಂದ 18 ವರ್ಷದ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮಾ” ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಪ್ರಕರಣವು ಆ.1 2022 ರಿಂದ ಜು.1 2023 ರೊಳಗೆ ನಡೆದಿರಬೇಕು. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ, 10,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡ ಪ್ರಶಸ್ತಿಗಳನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು.
ಅರ್ಜಿ ನಮೂನೆಗಳನ್ನು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತಿವುಳ್ಳ ಬಾಲಕ/ಬಾಲಕಿಯರು ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆಯ ಉಪನಿರ್ದೇಶಕರು, ಶಿವಾಜಿ ನಗರ ಬೆಳಗಾವಿ ಕಚೇರಿಯಲ್ಲಿ ಹಾಗೂ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಸಹ ಪಡೆಯಬಹುದಾಗಿದೆ.
ಅರ್ಜಿಗಳನ್ನು ಆ, 31 2023 ರ ಒಳಗಾಗಿ ಸಲ್ಲಿಸಬಹುದು ತದನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 2407235 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ, ಆ.14 : 2023-24 ನೇ ಸಾಲಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅತ್ತುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ತಲಾ ರೂಪಾಯಿ 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಸಂಸ್ಥೆಗಳಿಗೆ ತಲಾ ರೂಪಾಯಿ 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯಂದು ಪ್ರಧಾನ ಮಾಡಲಾಗುವುದು.
ಅರ್ಜಿ ನಮೂನೆಗಳನ್ನು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಶಿವಾಜಿ ನಗರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0831-2407235 ಗೆ ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಕನ್ನಡ ಬಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಆ.31 2023 ರೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವದೇ ಕಾರಣಕ್ಕೂ ಪರಿಗಣಿಸಲಾಗುವದಿಲ್ಲ ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ದೈಹಿಕ ವಿಕಲಚೇತನರು ಆರ್.ಟಿ.ಓ. ಇಂದ ಎಲ್.ಎಲ್.ಆರ್ ಮಾಡಿಸಲು ಸೂಚನೆ
ಬೆಳಗಾವಿ, ಆ.14: 2023-24ನೇ ಸಾಲಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ದೈಹಿಕ ವಿಕಲಚೇತನರಿಂದ ಎಲ್.ಎಲ್.ಆರ್ ಮಾಡಿಸಲು ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಯೋಜನೆಯಡಿ ಆನ್‍ಲೈನ್ ಅರ್ಜಿ ಸಲ್ಲಿಸಲು ಇಚ್ಛಿಸುವ ಜಿಲ್ಲೆಯ ದೈಹಿಕ ವಿಕಲಚೇತನ ವ್ಯಕ್ತಿಗಳು ಕಡ್ಡಾಯವಾಗಿ ಆರ್.ಟಿ.ಓ. ಇವರಿಂದ ಎಲ್.ಎಲ್.ಆರ್. ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: 0831-2476097 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲಾ ್ಲಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಮಹಾನಗರ ಪಾಲಿಕೆಯ ಪರಿಷತ್ ಸಭೆ ಆಗಸ್ಟ್.16 ರಂದು
ಬೆಳಗಾವಿ, ಆ.14 : ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯು ಆಗಸ್ಟ್.16 2023 ರಂದು ಬೆಳಗ್ಗೆ 11 ಗಂಟೆಗೆ ಪರಿಷತ್ ಸಭಾ ಗೃಹದಲ್ಲಿ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///