Belagavi News In Kannada | News Belgaum

ಸ್ವಾತಂತ್ರ್ಯೋತ್ಸವ ದಿನದಂದೇ ಬೆಳಗಾವಿ ವಿಭಜನೆಯ ಘೋಷಣೆ…!!

ಬೆಳಗಾವಿ- ಬೆಳಗಾವಿ ನಗರ ತಾಲ್ಲೂಕು ಬೆಳಗಾವಿ ಗ್ರಾಮೀಣ ತಾಲ್ಲೂಕು ಎಂದು ಬೆಳಗಾವಿ ತಾಲ್ಲೂಕು ವಿಭಜನೆ ಮಾಡಲು ನಿರ್ಧರಿಸಲಾಗಿದೆ ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿ ತಾಲ್ಲೂಕು ವಿಭಜನೆ ಆಗೋದು ಖಚಿತ,ಆದ್ರೆ ಅದನ್ನು ಯಾವ ರೀತಿ ವಿಭಜಿಸಬೇಕು ಅನ್ನೋದರ ಬಗ್ಗೆ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

ಬೆಳಗಾವಿ ಜಿಲ್ಲೆ ವಿಭಜನೆಯ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರ ಜೊತೆ ಒಂದು ಸುತ್ತಿನ ಚರ್ಚೆ ನಡೆದಿದೆ.ಚಿಕ್ಕೋಡಿ ಮತ್ತು ಗೋಕಾಕ್ ಎರಡನ್ನೂ ಜಿಲ್ಲೆ ಮಾಡಿ ಎಂದು ಒತ್ತಾಯಿಸಿದ್ದೇವೆ..

ಬೆಳಗಾವಿ ಜಿಲ್ಲೆ ವಿಭಜಿಸಿ ಮೂರು ಜಿಲ್ಲೆಗಳನ್ನು ಮಾಡಬೇಕು ಎನ್ನುವ ಪ್ರಸ್ತಾವಣೆ ಇದೆ.ಅದನ್ನೂ ಶೀಘ್ರದಲ್ಲೇ ಮಾಡ್ತೀವಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.