ಅಮೃತ ಸರೋವರ ದಡದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

ಕಾಗವಾಡ- ತಾಲೂಕಿನ ಮಂಗಸೂಳಿ ಗ್ರಾಮದ ಅಮೃತ ಸರೋವರ ಕೆರೆದಡದಲ್ಲಿ ಮಂಗಳವಾರ 77 ನೇ ಸ್ವಾತಂತ್ರ್ರೋತ್ಸವ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಮಾಜಿ ಸೈನಿಕರಾದ ವಿಠ್ಠಲ ಕುರುಣೆ ಅವರು, ಮಹಾತ್ಮಾ ಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಧ್ವಜಾರೋಹಣ ನೇರವೇರಿಸಿ, ಬಳಿಕ ಅಮೃತ ಸರೋವರ ದಡದಲ್ಲಿ ನಿರ್ಮಿಸಲಾಗಿರುವ ಶಿಲಾಫಲಕವನ್ನು ಉದ್ಘಾಟಿಸಿ ಹುತಾತ್ಮ ವೀರ ಯೋಧರಿಗೆ ಗೌರವ ಅರ್ಪಿಸಿದರು.
ಇದೇ ಸ್ಥಳದಲ್ಲಿ ವಸುಧಾ ವಂದನ್ ವನ ಅಭಿಯಾನದಡಿ 75 ಸಸಿಗಳ ನೆಡಲಾಯಿತು. ಮಾಜಿ ಸೈನಿಕರಿಗೆ ಹಾಗೂ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಗೋಪಾಲ ಮಾಳಿ, ಗ್ರಾಪಂ ಅಧ್ಯಕ್ಷರಾದ ಬಾಳು ರಾಮಚಂದ್ರ ಭಜಂತ್ರಿ, ಉಪಾಧ್ಯಕ್ಷರಾದ ಸವೀತಾ ರವೀಂದ್ರ ಪಾಟೀಲ್, ಪಿಡಿಒ ಸಂಜೀವ ಸೂರ್ಯವಂಶಿ, ಗ್ರಾಮದ ಪ್ರಮುಖರಾದ ರವೀಂದ್ರ ಪೂಜಾರಿ, ಪ್ರಶಾಂತ ಪಾಟೀಲ್, ಅಮರ ಪಾಟೀಲ್, ಚಿದಾನಂದ ಮಾಳಿ, ಬೀರು ಸಿಂಗಾಡಿ, ಶಿವಾನಂದ ಮಾಯಪ್ಪಗೋಳ ಐಇಸಿ ಸಂಯೋಜಕರಾದ ಅಮೀತ ಇಂಗಳಗಾಂವಿ, ಮುಂತಾದವರು ಹಾಜರಿದ್ದರು.