ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ನೆರವೇರಿಸಿದರು.
ಕುಲಪತಿಗಳಾದ ಪ್ರೋ. ವಿದ್ಯಾಶಂಕರ ಎಸ್.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವ ಮುಖಾಂತರ ಆಚರಿಸಲಾಯಿತು.
ವಿ ತಾ ವಿ ಯ ಮಾನ್ಯ ಕುಲಪತಿಗಳಾದ ಪ್ರೋ. ವಿದ್ಯಾಶಂಕರ ಎಸ್. ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಧ್ವಜಾರೋಹಣ ಮಾಡಿ ಮಾತನಾಡಿದ ಕುಲಪತಿಗಳು ಈ ಸ್ವಾತಂತ್ರ್ಯ ಉತ್ಸವದ ಶುಭಾಶಯಗಳನ್ನು ಹಾಗೂ ಅಭಿನಂದನೆಗಳನ್ನು ತಿಳಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟ ಎಲ್ಲ ಯೋಧರನ್ನು ಹಾಗೂ ಅವರ ತ್ಯಾಗ ಬಲಿದಾನವನ್ನು ನೆನಪಿಸಿಕೊಂಡು ಇವುಗಳು ನಮ್ಮ ರಾಷ್ಟ್ರದ ಸೇವೆಗೆ ದಾರಿದೀಪ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿ ಟಿ ಯು ಎನ ಎಸ್ ಎಸ್ ಘಟಕದ ವತಿಯಿಂದ “ವಿರೋಂ ಕಾ ವಂದನ್” ಕಾರ್ಯಕ್ರಮ ಅಡಿಯಲ್ಲಿ ಬೆಳಗಾವಿ ನಗರದಲ್ಲಿರುವ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ರಾಜೇಂದ್ರ ಕಲಘಟಗಿ (೧೦೩) ಹಾಗೂ ಶ್ರೀ ಗಂಗಾಧರ ಕಾಮತ(೧೦೧) ಅವರನ್ನು ವಿ ಟಿ ಯು ಕುಲಪತಿಗಳಾದ ಪ್ರೊ ವಿದ್ಯಾಶಂಕರ ಎಸ್. ಅವರು ಹಾಗೂ ವಿ ಟಿ ಯು ಅಧಿಕಾರಿಗಳ ತಂಡ ಅವರ ಗೃಹಕ್ಕೆ ತೆರಳಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿ ತಾ ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್., ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ, ಹಣಕಾಸು ಅಧಿಕಾರಿ ಶ್ರೀಮತಿ ಎಂ. ಎ. ಸಪ್ನಾ, ಸ್ಥಾನಿಕ ಅಭಿಯಂತರ ಶ್ರೀ.ವೈ ಎಸ್ ದೀಕ್ಷಿತ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪುಟ್ಟಸ್ವಾಮಿ ಗೌಡ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ಪಿ ವಿ ಕಡಗದಕೈ, ವಿಶೇಷಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.