Belagavi News In Kannada | News Belgaum

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ

ಗೋಕಾಕ : ಸ್ವಾತಂತ್ರ್ಯ ದಿನಾಚರಣೆ ನಿಮಿತ್ತವಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನಗರದ ಸಭಾ ಭವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಆಯೋಜಿಸಿದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕೆಐಎಚ್ಎಸ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ನೆರವೇರಿಸಿದರು.

ಈ ಶಿಬಿರವನ್ನು ಗೋಕಾಕ ನಗರದ ಅನೇಕ ಸಾರ್ವಜನಿಕರು , ಮಕ್ಕಳ, ವೃದ್ದರು ಸದುಪಯೋಗ ಪಡಿಸಿಕೊಂಡರು.


ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರಾದ ರಿಯಾಜ್ ಚೌಗಲಾ ,ಜುಬೇರ್ ಮಿರ್ಜಾಬಾಯಿ, ರಾಹುಲ್ ಬಡೆಸಗೋಳ ಹಾಗೂ ವೈದ್ಯರು , ಸಿಬ್ಬಂದಿಗಳು, ಫೌಂಡೇಶನ್ ತಂಡದ ಸದಸ್ಯರು ಉಪಸ್ಥಿತರಿದ್ದರು//////