Belagavi News In Kannada | News Belgaum

ಬೆಳಗಾವಿಯಿಂದ ದೆಹಲಿಗೆ ಹೊರಟ 50 ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ

ಬೆಳಗಾವಿ :  ಆ. 17 ಮತ್ತು 18 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಿಂದ ಆಯೋಜಿಸಲಾಗಿರುವ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳ ಅಧಿವೇಶನ ಹಾಗೂ ಕಾರ್ಯಾಗಾರಕ್ಕೆ ಬೆಳಗಾವಿಯಿಂದ ಜಿಲ್ಲೆಯಿಂದ ತೆರಳುತ್ತಿರುವ 50   ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ಬುಧವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ದೆಹಲಿಯ ತಾಲ್ ಕಟ್ಟೋರಾ ಕ್ರೀಂಡಾಗಣದಲ್ಲಿ ಆಯೋಜಿಸಲಾದ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳ ಅಧಿವೇಶನ ಹಾಗೂ ಕಾರ್ಯಾಗಾರಕ್ಕೆ  ಚಿಕ್ಕೋಡಿ ಹಾಗೂ ಬೆಳಗಾವಿಯಿಂದ 50 ಕಾಂಗ್ರೆಸ್‌  ಮಹಿಳಾ ಪದಾಧಿಕಾರಿಗಳು ಪ್ರಯಾಣ ಬೆಳೆಸಲಿದ್ದಾರೆ.

ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ‌ ಮಾತನಾಡಿ,  2024ರಲ್ಲಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ಅಧಿನಾಯಕಿ  ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ,  ಕಾಂಗ್ರೆಸ್‌ ನಾಯಕಿ ಪ್ರಿಯಂಕಾ ಗಾಂಧಿ,  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಡಿಸೋಜ ಅವರ ಕೋರಿಕೆಯ ಮೇರೆಗೆ ಪ್ರತಿ ಬ್ಲಾಕ್‌ ಮಹಿಳಾ ಅಧ್ಯಕ್ಷರನ್ನು ದೆಹಲಿಯಲ್ಲಿ ಆಗಸ್ಟ್‌ 17ಮತ್ತು 18ರಂದು ನಡೆಯುವ ಎಐಸಿಸಿ ಮಹಿಳಾ ಅಧಿವೇಶನದಲ್ಲಿ ಭಾಗವಹಿಸಲು ಹೊರಟಿದ್ದಾರೆ ಎಂದರು.

 

 

ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ   ಕೈಗೊಳ್ಳಬೇಕಾದ ಕ್ರಮಗಳು, ಅವುಗಳ ರೂಪುರೇಷೆ ಕುರಿತು ಚರ್ಚೆ ನಡೆಸಲು ಅಧಿವೇಶನ ಕರೆದಿದ್ದು,  50 ಕಾಂಗ್ರೆಸ್‌  ಮಹಿಳಾ ಪದಾಧಿಕಾರಿಗಳು ತೆರಳುತ್ತಿದ್ದಾರೆ ಎಂದರು. ಮಹಿಳಾ ಕಾಂಗ್ರೆಸ್‌ ಅಧಿವೇಶನ ಮಹತ್ವದ್ದಾಗಿದೆ ಹೀಗಾಗಿ ರಾಜ್ಯ ಮಹಿಳಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎರಡು ದಿನಗಳ ಕಾಲ ತರಬೇತಿ ಮತ್ತು ಕಾರ್ಯಾಗಾರ ಪಾಲ್ಗೊಳಲಿದಾರೆ ಎಂದು ಮಾಹಿತಿ ತಿಳಿಸಿದರು.

ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರದೀಪ ಎಂ ಜೆ ಅವರು  ಬೆಳಗಾವಿಯಿಂದ ದೆಹಲಿಗೆ ತೆರಳುತ್ತಿರುವ 50  ಜನ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳ ತಂಡಕ್ಕೆ, ಮೂರು ದಿನಗಳ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿ, ಪ್ರಯಾಣ ಸುಖಃಕರವಾಗಿರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೇ ಕಲ್ಪನಾ ಜೋಶಿ ಹಾಗೂ ಮಹಿಳಾಬ ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.//////