ಬೆಳಗಾವಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪನಮನ

ಬೆಳಗಾವಿ: ಕೇಂದ್ರ ಸರ್ಕಾರದ “ನನ್ನ ನೆಲ ನನ್ನ ದೇಶ” ಅಭಿಯಾನದಡಿಯಲ್ಲಿ ಕೋಟೆ ಕೆರೆ ಬಳಿಯ ಆವರಣದಲ್ಲಿ ಬೆಳಗಾವಿಯ ದಿವಂಗತ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಸದೆ ಮಂಗಳಾ ಅಂಗಡಿ ಅವರು ಚಾಲನೆ ನೀಡಲಾಯಿತು.
ಮಹಾನಗರ ಪಾಲಿಕೆ ವತಿಯಿಂದ ಕೋಟೆ ಕೆರೆ ಬಳಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಪಾಲಿಕೆ ಅಧಿಕಾರಿಗಳು ಕೈ ಜೋಡಿಸಿದರು.
ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರ, ಹೊಸ,”ನನ್ನ ನೆಲ ನನ್ನ ದೇಶ” ಅಭಿಯಾನದಡಿ ದೇಶದ ಪ್ರತಿಯೊಂದು ಸರಕಾರಿ ಕಚೇರಿಗಳ ವತಿಯಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ವೀರರಾದ ಗಂಗಪ್ಪ ಮಾಳಗಿ, ನಾಗಪ್ಪ ಮಾಸ್ತಿ, ಆನಂದ ಚಿಕ್ಕೋಡಿ ಬಾಬು ಅಷ್ಟೇಕರ, ಪರಶುರಾಮ ಪಾಟೀಲ, ಭರತ್ ಮಸ್ಕಿ, ರಾವಸಾಬ್ ಕಂಕಾರೆಡ್ಡಿ, ಮನೋಹರ ಗಣಾಚಾರಿ ಅವರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು./////