Belagavi News In Kannada | News Belgaum

ಗ್ಯಾಸ್‌ ಟ್ಯಾಂಕರ್‌ ಅಪಘಾತ: ಬೆಳಗಾವಿ–ಧಾರವಾಡ ಸಂಚಾರ ಮಾರ್ಗ ಬದಲು

ಬೆಳಗಾವಿ: ಧಾರವಾಡ ಬಳಿಯ ಹೈಕೋರ್ಟ್‌ ಬಳಿ ಗ್ಯಾಸ್‌ ಟ್ಯಾಂಕರ್‌ ಅಪಘಾತವಾದ್ದರಿಂದ ತಾತ್ಕಾಲಿಕವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ವಾಹನ ಸವಾರರು ಬದಲಿ ಮಾರ್ಗ ಸನುಸರಿಸಬೇಕು ಎಂದು ಎಸ್ಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.
ಬದಲಿ ಮಾರ್ಗಗಳು ಯಾವವು?: 1) ಬೆಳಗಾವಿಯಿಂದ ಕಿತ್ತೂರು– ತಡಕೋಡ– ಗರಗ– ಧಾರವಾಡ ಮಾರ್ಗ 2) ಹಿರೇಬಾಗೇವಾಡಿ– ಬೈಲಹೊಂಗಲ– ಬೆಳವಡಿ– ತಡಕೋಡ– ಗರಗ– ಧಾರವಾಡ ಮಾರ್ಗ 3) ಸಂಕೇಶ್ವರ– ಹುಕ್ಕೇರಿ– ಘಟಪ್ರಭಾ– ಗೋಕಾಕ– ಯರಗಟ್ಟಿ– ಸವದತ್ತಿ– ಧಾರವಾಡ 4) ನಿಪ್ಪಾಣಿ– ಚಿಕ್ಕೋಡಿ– ಹುಕ್ಕೇರಿ– ಘಟಪ್ರಭಾ– ಗೋಕಾಕ– ಯರಗಟ್ಟಿ– ಸವದತ್ತಿ– ಧಾರವಾಡ.

ಧಾರವಾಡ ನಗರದ ಹೈಕೋರ್ಟ್‌ ಸಮೀಪ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಗ್ಯಾಸ್‌ ಟ್ಯಾಂಕರ್‌ ಸಿಲುಕಿಕೊಂಡಿದೆ. ಸೇತುವೆ ಸೀಲಿಂಗ್‌ಗೆ ಟ್ಯಾಂಕರ್‌ ಮುಚ್ಚಳ ತಾಗಿ ಅನಿಲ ಸೋರಿಕೆಯಾಗುತ್ತಿದೆ. ಅಂಡರ್‌ ಪಾಸ್‌ ಸಮೀಪ ಎರಡೂ ಕಡೆ (ಬೆಳಗಾವಿ ಮತ್ತು ಧಾರವಾಡ ಕಡೆಗೆ ಸಾಗುವ) ವಾಹನಗಳ ಸಂಚಾರ ತಡೆಹಿಡಿಯಲಾಗಿದೆ. ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅಗ್ನಿಶಾಮಕ ಸಿಬ್ಬಂದಿ, ಎಚ್‌ಪಿಸಿಎಲ್‌ ತಂಡ, ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.//////