ಸ್ಮಾಟ್೯ ಸಿಟಿಯಿಂದ ಅವೈಜ್ಞಾನಿಕ ರಸ್ತೆ ಅಗಲೀಕರಣ: ಡಿಸಿಗೆ ಮನವಿ

ಬೆಳಗಾವಿ: ಶಹಾಪುರ ಎಸ್ ಬಿಐ ವೃತ್ತದಿಂದ ಹಳೆ ಪಿಬಿ ರಸ್ತೆಯ ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಮಾಡಿದ್ದಾರೆ. ಸ್ಮಾಟ್೯ ಸಿಟಿ ಅಧಿಕಾರಿಗಳು ಇದರಲ್ಲಿ ತಪ್ಪು ಮಾಡಿದ್ದಾರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ರಾಜಕುಮಾರ ಟೋಪಣ್ಣವರ ಮತ್ತು ಸುಜೀತ ಮುಳಗುಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶಹಾಪುರದ ಎಸ್ ಬಿಐ ವೃತ್ತದಿಂದ ಹಳೆ ಪಿ.ಬಿ.ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸ್ಮಾಟ್೯ ಸಿಟಿಯಿಂದ ರಸ್ತೆ ಅಗಲೀಕರಣ ಮಾಡಲಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದು ಯಾರಿಗೂ ಲಾಭವಾಗಿಲ್ಲ. ಈ ರಸ್ತೆಯಲ್ಲಿ ಸಾಕಷ್ಟು ಸಂಚಾರ ಸಮಸ್ಯೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಸ್ಮಾಟ್೯ ಸಿಟಿಯಿಂದ ಅವೈಜ್ಞಾನಿಕ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅನ್ಯಾಯವಾದ ಕುಟುಂಬಸ್ಥರು ನ್ಯಾಯಾಲಯಕ್ಕೆ ಹೋದಾಗ ನ್ಯಾಯಾಲಯ ಬೆಳಗಾವಿ ಸ್ಮಾರ್ಟ್ ಸಿಟಿ ಅವರು ಪರಿಹಾರ ಕೊಡಬೇಕೆಂದು ಸೂಚನೆ ನೀಡಿದೆ. ರಸ್ತೆ ಅಗಲೀಕರಣಕ್ಕೂ ಸ್ಮಾರ್ಟ್ ಸಿಟಿಗೂ ಯಾವುದೇ ರೀತಿ ಸಂಬಂಧವಿಲ್ಲ.
ಸ್ಮಾರ್ಟ್ ಸಿಟಿ ಹಣ ಸಾರ್ವಜನಿಕರ ತೆರಿಗೆಯದ್ದು. ಸ್ಮಾರ್ಟ್ ಸಿಟಿಯವರು ಯಾಕೆ ಪರಿಹಾರ ಕೊಡಬೇಕು. ಇದರಲ್ಲಿ ತಪ್ಪು ಮಾಡಿದವರು ಸ್ಮಾರ್ಟ್ ಸಿಟಿ ಅಂದಿನ ಎಂ.ಡಿ.ಗಳು, ಕಾರ್ಯನಿರ್ವಾಹಕ ಅಭಿಯಂತರರು, ಪಿಎಂಸಿ ಕಂಪನಿಯ ಟ್ರ್ಯಾಕ್ಟ ಟೆಬಲ್ ಇಂಡಿಯಾದಿಂದ ಪರಿಹಾರ ಕೊಡಬೇಕು. ಅಲ್ಲದೆ, ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚಾರ ಮಾಡಲು ಅನುಕುಲವಾಗುತ್ತಿದೆ. ಇದನ್ನು ಒಂದು ವಾರದಲ್ಲಿ ಸರಿಪಡಿಸದಿದ್ದರೇ ಶಹಾಪುರ ಎಸ್ ಬಿಐ ವೃತ್ತದಿಂದ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.//////