Belagavi News In Kannada | News Belgaum

ಮನೆ ಮುಂದೆಯೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಮಹಿಳೆ

ಚಿಕ್ಕಬಳ್ಳಾಪುರ: ಅಕ್ರಮವಾಗಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಮನೆ ಮಾಲೀಕಳನ್ನ ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಪ್ರಮೀಳಮ್ಮ ಎಂಬಾಕೆ ಮನೆಯ ಕಾಂಪೌಂಡ್‌ನಲ್ಲೇ ಅಕ್ರಮವಾಗಿ ಗಾಂಜಾ ಗಿಡಗಳನ್ನ ಬೆಳೆಸಿದ್ದಳು. ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಉಪ ವಿಭಾಗದ ಎಸಿಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ದಾಳಿ ನಡೆಸಿ ಬರೋಬ್ಬರಿ 66 ಸಾವಿರ ರೂ. ಮೌಲ್ಯದ 11.5 ಕೆಜಿಯಷ್ಟು ಹಸಿ ಗಾಂಜಾ ಗಿಡಗಳನ್ನ ಜಪ್ತಿ ಮಾಡಿದ್ದಾರೆ.
ಮನೆ ಮಾಲೀಕಳಾದ ಪ್ರಮೀಳಮ್ಮನನ್ನ ಬಂಧಿಸಿದ್ದು, ಆಕೆ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ./////