Belagavi News In Kannada | News Belgaum

ಬಾರದ ಬಾಕಿ ಬಿಲ್ ಗೆ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ

ಬೆಳಗಾವಿ: ಶಾಲಾ ಕಟ್ಟಡ ಕಾಮಗಾರಿ ಮುಗಿಸಿದರೂ ಬಾಕಿ ಬಿಲ್ ಬಾರದ ಹಿನ್ನಲೆ ಅದೇ ಶಾಲಾ ಕಟ್ಟಡ ಮೇಲೆ ಗುತ್ತಿಗೆದಾರ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆಣಚಿನಮರಡಿಯಲ್ಲಿ ನಡೆದಿದೆ.

ಗುತ್ತಿಗೆದಾರ ರಾಮಣ್ಣ ಅಡಿವೆಪ್ಪ ಸರಕಪ್ಪಗೋಳ ಆತ್ಮಹತ್ಯೆಗೆ ಯತ್ನಿಸಿದವರು. 2018ರಲ್ಲಿ ಪ್ರೌಢ ಶಾಲಾ ಕಟ್ಟಡ ಕಾಮಗಾರಿ ಕೈಗೊಂಡಿದ್ದ ರಾಮಣ್ಣ ಅವರು ಎನ್​ಸಿಸಿ ಕಂಪನಿಯಿಂದ ಸುಮಾರು ೨೩ ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿರುವುದಾಗಿ ಆರೋಪಿಸಿ ಸುಮಾರು ೨ ಗಂಟೆಗಳ ಕಾಲ ಶಾಲೆಯ ಮೇಲೆ ಕುಳಿತು ನಂತರ ರಾಮಣ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ  ಪೊಲೀಸರು ಗುತ್ತಿಗೆದಾರನನ್ನು ಮನವೊಲಿಸಿ ಕೆಳಗೆ ಕರೆ ತಂದಿದ್ದಾರೆ. ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ./////