14ರ ಬಾಲಕನಿಗೆ ಶ್ರೀಕಾಡದೇವರ ಮಠದ ಉತ್ತರಾಧಿಕಾರಿ ಪಟ್ಟ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ-ಕಾಡಸಿದ್ದೇಶ್ವರ ಮಠದ ನೂತನ ಉತ್ತರಾಧಿಕಾರಿಗಳಾದ ರೇಣುಕ ದೇವರ ಪುರಪ್ರವೇಶ ಕಾರ್ಯಕ್ರಮ ಸಕಲವಾದ್ಯಮೇಳದೊಂದಿಗೆ ಅದ್ಧೂರಿಯಾಗಿ ನೆರವೇರಿತು. 14ರ ಬಾಲಕನಿಗೆ ಶ್ರೀಕಾಡದೇವರ ಮಠದ ಉತ್ತರಾಧಿಕಾರಿ ಪಟ್ಟ ನೀಡಿ ಗ್ರಾಮದ ತುಂಬಾ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಈ ಪುರಪ್ರವೇಶ ಮೆರವಣಿಗೆಯಲ್ಲಿ ಕುದುರೆ, ಸಕಲವಾದ್ಯ ಮೇಳಗಳು, ಪುರವಂತರು, ಸುಮಂಗಲಿಯರ ಕುಂಭದೊಂದಿಗೆ ಅದ್ಧೂರಿಯಾಗಿ ಜರುಗಿತು. ಗ್ರಾಮದ ಬೀದಿ ಬೀದಿಯಲ್ಲೂ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಮೂಡಿಸಿ ಪುರಪ್ರವೇಶ ಮೆರವಣಿಗೆಯನ್ನ ಜನರು ಸ್ವಾಗತಿಸಿದರು.
ಸರ್ಕಾರಿ ಆಸ್ಪತ್ರೆಯ ಮೂಲಕ ಹಳೇ ಯಡೂರ, ಬಸವಣ್ಣನ ದೇವಸ್ಥಾನ, ಚೆನ್ನಮ್ಮ ವೃತ್ತ ಮಾರ್ಗವಾಗಿ ಮೆರವಣಿಗೆ ಸಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ನಂತರ ನೂತನ ಉತ್ತರಾಧಿಕಾರಿಗಳಾದ ರೇಣುಕಾ ದೇವರು ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಪುರಪ್ರವೇಶ ಮೆರವಣಿಗೆಯು ಕಾಡಸಿದೇಶ್ವರ ಮಠಕ್ಕೆ ಬಂದ ನಂತರ ಸುಮಲಿಂಗಯರು ಆರತಿ ಬೇಳಗಿ ಸ್ವಾಗತಿಸಿಕೊಂಡರು. ಬಳಿಕ ನೂತನ ಉತ್ತರಾಧಿಕಾರಿಗಳಾದ ರೇಣುಕಾ ದೇವರು ಕಾಡಸಿದ್ದೇಶ್ವರ ದೇವರಿಗೆ ನಮಸ್ಕರಿಸಿ. ನಂತರ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಆಶಿವಾರ್ದ ಪಡೆದುಕೊಂಡರು. ಈ ಸಂಧರ್ಭದಲ್ಲಿ ಸೂಗೂರೇಶ್ವರ ದೇವರು, ಅನ್ನದಾನ ಶಾಸ್ತ್ರಿಗಳು ಸೇರಿದಂತೆ ಯಡೂರ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು./////