Belagavi News In Kannada | News Belgaum

ತೋಟಗಾರಿಕೆ ಇಲಾಖೆ: ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ, ಆ.22 : 2023-24 ನೇ ಸಾಲಿನ Sಒಂಒ ಯೋಜನೆಯ ತೋಟಗಾರಿಕೆಯಲ್ಲಿ ಯಾಂತ್ರಿಕರಣ ಕಾರ್ಯಕ್ರಮದಡಿ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧತೆಗೆ, ಬೆಳೆ ಕಟಾವಿಗೆ ಮತ್ತು ಬೆಳೆ ಕಟಾವಿನ ನಂತರ ಉಪಯೋಗಿಸುವ ವಿವಿಧ ಅನುಮೋದಿತ ಯಂತ್ರೋಪಕರಣಗಳಿಗಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ..

ಜೌಷಧಿ ಸಿಂಪರಣೆ ಮಾಡುವ ಯಂತ್ರ, ಕಸ ತೆಗೆಯುವ ಯಂತ್ರ, ಬೆಳೆ ಕಟಾವು ಯಂತ್ರಗಳು, ಸಾವಯವ ಅವಶೇಷ ಕತ್ತರಿಸುವ ಯಂತ್ರ, ಚೈನ್‍ಸಾ, ತೆಂಗಿನ ಮರ ಹತ್ತುವ ಯಂತ್ರ, ಅರಿಷಿಣ ಕುದಿಸುವ ಯಂತ್ರ, ಪ್ಲಾಸ್ಟಿಕ್ ಹೊದಿಕೆ ಮಾಡುವ ಯಂತ್ರ, ರೊಟೊವೆಟರ್, ಸೋಲಾರ್ ಡ್ರೈಯರ್, ಮೋಹಕ ಬಲೆ, ಗ್ರೇಡಿಂಗ್ ಮಷಿನ್, ಗುಂಡಿ ತೆಗೆಯುವ ಯಂತ್ರ, ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಟ್ರಾಲಿ ಹಾಗೂ ಇತ್ಯಾದಿ ಯಂತ್ರೋಪಕರಣಗಳನ್ನು ಖರೀದಿಸಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ 50ರ ಸಹಾಯಧನ ಹಾಗೂ ಇತರೆ ವರ್ಗದ ರೈತರಿಗೆ ಶೇ 40ರ ಸಹಾಯಧನ ನೀಡಲಾಗುವುದು..

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಬೆಳೆಗಾರರು ತಾಲ್ಲೂಕು ಹಾಗೂ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಕಾರ್ಯಾದೇಶಗಳನ್ನು ಪಡೆದ ನಂತರ ಯಂತ್ರೊಪಕರಣಗಳನ್ನು ಅನುಮೋದಿತ ಸಂಸ್ಥೆಗಳಿಂದ ಖರೀದಿಸಬಹುದಾಗಿದೆ ಎಂದು ಬೆಳಗಾವಿ (ಜಿ.ಪಂ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..