Belagavi News In Kannada | News Belgaum

ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಅಂದರ್‌

ಬೆಳಗಾವಿ:  ನಗರ  ಮನೆಯೊಂದರಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮನೆಗಳ್ಳನನ್ನು  ಪೊಲೀಸ್‌ರು  ಬಂಧಿಸಿ, ಆರೋಪಿಯಿಂದ  10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ನಿಪ್ಪಾಣಿಯ ಯಾಸೀನ ಹಾಸಿಮ ಶೇಖ (23) ಬಂಧಿತ ಆರೋಪಿ.  ಅ.20 ರಂದು ಸಮರ್ಥ ನಗರದ ಮನೆಯೊಂದರಲ್ಲಿ ಯಾಸೀನ  ಚಿನ್ನಾಭರಣ ಮತ್ತು ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದನು,  ಈ  ಕುರಿತು ಮಾರ್ಕೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣ  ಜಾಡು ಹಿಡಿದು ಜಾಲಾಡಿದ ಖಾಕಿ ಪಡೆ ಆರೋಪಿಯನ್ನು ಬಂಧಿಸಿ, ಆತನಿಂದ   ಸುಮಾರು 10 ಲಕ್ಷ ರೂ . ಮೌಲ್ಯದ 231 ಗ್ರಾಂ. ಚಿನ್ನಾಭರಣ ಹಾಗೂ 140 ಗ್ರಾಂ.  ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.  ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ/////