Belagavi News In Kannada | News Belgaum

ನೈಜೀನ್ ಸರೋವರದಲ್ಲಿ ದೋಣಿ ವಿಹಾರ ನಡೆಸಿದ ಸೋನಿಯಾ ಗಾಂಧಿ

ಶ್ರೀನಗರ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿನ ನೈಜೀನ್ ಸರೋವರದಲ್ಲಿ ದೋಣಿ ವಿಹಾರ ನಡೆಸಿದ್ದಾರೆ.

ಸೋನಿಯಾ ಅವರ ದೋಣಿ ವಿಹಾರದ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ. ಎರಡು ದಿನಗಳ ಕಾಶ್ಮೀರ ಭೇಟಿ ಕೈಗೊಂಡಿರುವ ಅವರು ಪಕ್ಷದ ಯಾವುದೇ ಸಭೆ, ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ. ಜತೆಗೆ ಯಾವುದೇ ನಾಯಕರ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಜಮ್ಮು -ಕಾಶ್ಮೀರ ಮತ್ತು ಲಡಾಖ್​​ನಲ್ಲಿ ಒಂದು ವಾರದಿಂದ ಕಾಲ ಕಳೆಯುತ್ತಿರುವ ಪಕ್ಷದ ನಾಯಕ, ವಯನಾಡ್​ ಸಂಸದ ರಾಹುಲ್​ ಗಾಂಧಿ ಅವರು ಕಾಶ್ಮೀರಕ್ಕೆ ಬಂದಿಳಿದಿದ್ದು, ಅವರನ್ನು ಸೋನಿಯಾ ಭೇಟಿ ಮಾಡಲಿದ್ದಾರೆ.

ಒಂದು ವಾರದ ಹಿಂದೆ ಲಡಾಖ್ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ, ಲೇಹ್‌ನ ಪ್ಯಾಂಗಾಂಗ್‌ ಸರೋವರದ ಬಳಿ ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದರು. ಇದೀಗ ರಾಹುಲ್ ಕಾಶ್ಮೀರಕ್ಕೆ ಆಗಮಿಸಿದ್ದು, ಅಲ್ಲೇ ಎರಡು ದಿನ ಇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ./////