Belagavi News In Kannada | News Belgaum

ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ ಎಂದ ಡಿ.ಕೆ. ಶಿವಕುಮಾರ್‌

ಚಾಮರಾಜನಗರ: ಪೂರ್ಣ ಮೆಜಾರಿಟಿ ಇದೆ, ನಮಗೆ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ನಮಗಿಲ್ಲ.
ಆದರೆ, ಪಕ್ಷ ಇಚ್ಚಿಸಿ ಬರುವವರನ್ನು ತಡೆಯಲಾಗುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟವರಿಗೆ ನಾವು ಕೂಡ ವಿಶ್ವಾಸ ತೋರಿಸಬೇಕಾಗಲಿದೆ ಎಂದರು.

ಪ್ರಧಾನಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಬಿಜೆಪಿ ನಾಯಕ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಅವರಿಗೆ ಆಗುತ್ತಿಲ್ಲ. ಪ್ರಧಾನಿ ಮೋದಿ ಬರುವ ವಿಚಾರವನ್ನು ಆರ್.ಅಶೋಕ್‌ಗೆ ಹೇಳಿಲ್ಲ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಗವರ್ನರ್ ಬರುವುದು ಬೇಡ, ಸಿಎಂ ಬರುವುದು ಬೇಡ, ಡಿಸಿಎಂ ಬರುವುದು ಬೇಡ ಅಂದಿದ್ದಾರೆ. ನಮಗೆ ಸಮಯ, ವ್ಯವಹಾರ ಪ್ರಜ್ಞೆ ಇದೆ. ಪ್ರೊಟೊಕಾಲ್ ಗೊತ್ತಿದೆ ಆದರೆ, ಅವರದೇ ಪಕ್ಷದ ನಾಯಕರಿಗೆ ಮಾಹಿತಿ ಇಲ್ಲ ಎಂದು ಹರಿಹಾಯ್ದರು.

ಇನ್ನು, ಇದೇ ವೇಳೆ ಆಕ್ಸಿಜನ್ ದುರಂತದಲ್ಲಿ ಮಡಿದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವ ವಿಚಾರವನ್ನು ಜಿಲ್ಲೆಯ ಜನಪ್ರನಿಧಿಗಳು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು./////