ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಾಶ್ಪೋಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟಿರುವವರ ಸಂಖ್ಯೆ ಒಂಬತ್ತಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ತಲೆ ಬೇರ್ಪಟ್ಟ ದೇಹವು ಕೊಳವೊಂದರಲ್ಲಿ ಪತ್ತೆಯಾಗಿದೆ. ನೆರೆ ಮನೆಯ ಆವರಣದಲ್ಲಿ ತಲೆ ಪತ್ತೆಯಾಗಿದೆ. ಒಂದು ಕೈ ಮತ್ತು ಎರಡು ಬೆರಳುಗಳು ಕೂಡಾ ದೇಹದಿಂದ ಬೇರ್ಪಟ್ಟಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಇಡೀ ರಾತ್ರಿ ತನಿಖೆ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಪಟಾಕಿ ಕಾರ್ಖಾನೆಯ ಮಾಲೀಕನ ಪಾಲುದಾರ ಎಂದು ಶಂಕಿಸಲಾಗಿದೆ. ದುರಂತ ಸಂಭವಿಸಿದ ಸ್ಥಳವಾದ ಮಾಶ್ಪೋಲೆಯಲ್ಲಿ ಸೋಮವಾರ ಪರಿಸ್ಥಿತಿ ಶಾಂತ ಸ್ಥಿತಿಗೆ ಮರಳಿದೆ ಎಂದು ಅವರು ಹೇಳಿದ್ದಾರೆ./////