ಕೇವಲ 750 ರೂ. ಸಾಲ ಮಾಡಿ ಪ್ರಾಣ ಬಿಟ್ಟ ಮಗ : ಕಣ್ಣೀರಿಟ್ಟ ಹೆತ್ತವರು

ಚಿಕ್ಕಮಗಳೂರು: 7ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ಖಾಸಗಿ ಶಾಲೆಯಲ್ಲಿ ನಡೆದಿದೆ. ಮಗನ ಸಾವಿಗೆ ಮಾಜಿ ಯೋಧ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಶ್ರೀನಿವಾಸ್ ಮೃತ. ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಡೂರು ತಾಲೂಕಿನ ಹಿರೇ ಬಳ್ಳೇಕೆರೆ ಗ್ರಾಮದ ವಿದ್ಯಾರ್ಥಿ ಶ್ರೀನಿವಾಸ್. ಕೊಪ್ಪ ಪಟ್ಟಣದ ಖಾಸಗಿ ಶಾಲೆಯ 9ನೇ ತರಗತಿ ಓದುತ್ತಿದ್ದ ಶ್ರೀನಿವಾಸ್ 750 ರೂ. ಸಾಲ ಮಾಡಿಕೊಂಡಿದ್ದನು. ಆಗಸ್ಟ್ 22ರಂದು ಕೊಪ್ಪದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ ನೋಟ್ನಲ್ಲಿ ಸಾವಿಗೆ ಕಾರಣರಾದ ಅವರ ಬಗ್ಗೆ ಬರೆದಿದ್ದಾನೆ. ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ ಏಕಾಏಕಿ ವೈರಲ್ ಆಗಿದೆ. ಆತ್ಮಹತ್ಯೆಯ ಪ್ರಕರಣ ಕುರಿತಾಗಿ, 750 ರೂ. ಸಾಲ ಕೊಟ್ಟು ಮೂರು ಸಾವಿರ ಹಣ ಕೇಳಿರೋ ಆರೋಪ ಕೇಳಿ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗದಿದ್ದರೆ ಎಸ್ ಪಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ//////