Belagavi News In Kannada | News Belgaum

ನಾಯಿ ಬೊಗಳಿದ್ದಕ್ಕೆ ವೃದ್ಧನಿಗೆ ಚಾಕು ಇರಿತ

ಬೆಂಗಳೂರು: ನಾಯಿಯೊಂದು ಬೊಗಳಿದ್ದಕ್ಕೆ ಅದನ್ನು ವೃದ್ಧನೊಬ್ಬ ಛೂ ಬಿಟ್ಟಿದ್ದಾನೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.

ಆರೋಪಿ ರಾಜು ವೃದ್ಧ ಬಾಲಸುಬ್ರಹ್ಮಣ್ಯ ಎಂಬವರಿಗೆ ಚಾಕು ಇರಿದಿದ್ದಾನೆ. ರಾಜು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಯಿಯೊಂದು ಬೊಗಳಿತ್ತು. ಈ ನಾಯಿಯನ್ನು ವೃದ್ಧನೇ ಬಿಟ್ಟಿದ್ದಾನೆಂದು ಕೋಪಗೊಂಡ ರಾಜು ಚಾಕು ಇರಿದಿದ್ದಾನೆ. ಘಟನೆ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ವೃದ್ಧನಿಗೆ ಚಾಕು ಇರಿದ ಆರೋಪಿ ರಾಜುನನ್ನು ಬಂಧಿಸಿದ್ದಾರೆ./////