Belagavi News In Kannada | News Belgaum

ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಐಗಳಿ ಪೊಲೀಸರು

ಅಥಣಿ: ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಿ ಮೂವರನ್ನು ಬಂಧಿಸಿ ಅವರಿಂದ 2 ಲಕ್ಷ 50 ಸಾವಿರ ರೂ. ಮೌಲ್ಯದ  6 ಮೋಟಾರ್ ಸೈಕಲ್ ಗಳನ್ನ ವಶಪಡಿಸಿಕೊಳ್ಳುವಲ್ಲಿ ಐಗಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸ್ ಇಲಾಖೆಯ  ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಐಗಳಿ ಪೊಲೀಸರು ಕಾರ್ಯಚರಣೆ ನಡೆಸಿ ವಿಜಯಪುರ ಜಿಲ್ಲೆಯ ಬಿಜ್ಜರಗಿ ತಾಲೂಕಿನ ಪ್ರಶಾಂತ ಬಾಡಗಿ( 21) ಶಿವಾನಂದ ಉಮರಾನಿ(23) ಶಿವರಾಜ ಉಪ್ಪಾರ(22) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಅಥಣಿ ಡಿವೈಎಸ್ಪಿ  ಶ್ರೀಪಾದ್ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಮಾರ್ಗದರ್ಶನದಲ್ಲಿ ಐಗಳಿ ಪಿಎಸ್ಐ ಸುಮಲತಾ ಆಸಂಗಿ ನೇತೃತ್ವದಲ್ಲಿ  ಎಎಸ್ಐ ಎಸ್ ಎಮ್ ಮೇತ್ರಿ, ಜೆ.ಐ. ಪಟೇಗಾರ, ಡಿ.ಟಿ. ಶಾನುವಾಡ, ಎಸ್.ಎಚ್. ಸುನಗೊಂಡ, ಎ.ಸಿ. ಮುಜಾವರ, ಜಿ.ಪಿ ರಾಥೋಡ, ಆರ್.ಪಿ.  ಕೊಣ್ಣೂರ, ವಿ.ಕೆ. ಕಾಂಬಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೈಗಳಿ ಪೊಲೀಸರು ಈ ಕಾರ್ಯಾಚರಣೆಗೆ  ಬೆಳಗಾವಿ ಎಸ್ ಪಿ ಡಾ. ಸಂಜೀವ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ./////