ಬೆಳಗಾವಿ ಕೆಎಮ್ಎಫ್ ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿ ಅಡಿಯಲ್ಲಿ ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು: ಸಂಸ್ಥೆಯ ಹೆಸರು : KMF ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ( KMF BEMUL)
ಹುದ್ದೆಗಳ ಸಂಖ್ಯೆ: 46
ಉದ್ಯೋಗ ಸ್ಥಳ: ಬೆಳಗಾವಿ – ಕರ್ನಾಟಕ
ಹುದ್ದೆಯ ಹೆಸರು: ವಿಸ್ತರಣಾ ಅಧಿಕಾರಿ, ಕಿರಿಯ ತಂತ್ರಜ್ಞರ
ಹುದ್ದೆಗಳ ವಿಭಾಗವಾರು ಮಾಹಿತಿ:
ಸಹಾಯಕ ವ್ಯವಸ್ಥಾಪಕ – 3 ಹುದ್ದೆಗಳು
ತಾಂತ್ರಿಕ ಅಧಿಕಾರಿ- 7 ಹುದ್ದೆಗಳು
ವಿಸ್ತರಣಾ ಅಧಿಕಾರಿ ಗ್ರೇಡ್-III- 10 ಹುದ್ದೆಗಳು
ಆಡಳಿತ ಸಹಾಯಕ ಗ್ರೇಡ್-II- 5 ಹುದ್ದೆಗಳು
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II- 5 ಹುದ್ದೆಗಳು
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II- 2 ಹುದ್ದೆಗಳು
ರಸಾಯನಶಾಸ್ತ್ರಜ್ಞ ಗ್ರೇಡ್-II- 4 ಹುದ್ದೆಗಳು
ಜೂನಿಯರ್ ಸಿಸ್ಟಮ್ ಆಪರೇಟರ್- 1 ಹುದ್ದೆ
ಕಿರಿಯ ತಂತ್ರಜ್ಞರು- 9 ಹುದ್ದೆಗಳು
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ: ಸಹಾಯಕ ವ್ಯವಸ್ಥಾಪಕ- ರೂ.52650-97100/-
ತಾಂತ್ರಿಕ ಅಧಿಕಾರಿ- ರೂ.43100-83900/-
ವಿಸ್ತರಣಾ ಅಧಿಕಾರಿ ಗ್ರೇಡ್-III- ರೂ.33450-62600/-
ಆಡಳಿತ ಸಹಾಯಕ ಗ್ರೇಡ್-II- ರೂ.27650-52650
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II- ರೂ.27650-52650
ಮಾರ್ಕೆಟಿಂಗ್ ಸಹಾಯಕ ಗ್ರೇಡ್-II- ರೂ.27650-52650
ರಸಾಯನಶಾಸ್ತ್ರಜ್ಞ ಗ್ರೇಡ್-II- ರೂ.27650-52650
ಜೂನಿಯರ್ ಸಿಸ್ಟಮ್ ಆಪರೇಟರ್- ರೂ.27650-52650
ಕಿರಿಯ ತಂತ್ರಜ್ಞರು- ರೂ.21400-42000/-
ಪ್ರಮುಖ ದಿನಾಂಕಗಳು: 28/8/2023 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, 26/09/2023 ರ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು www.bemul.in ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದ್ದು ಮಾಹಿತಿ ಪಡೆಯಬಹುದಾಗಿದೆ./////