Belagavi News In Kannada | News Belgaum

ತಿಲಕವಾಡಿ ಪೊಲೀಸ್‌ ರಿಂದ ಬೈಕ್‌ ಕಳ್ಳನ ಬಂಧನ

ಬೆಳಗಾವಿ: ತಿಲಕವಾಡಿ ಪೊಲೀಸ್‌  ರಿಂದ ಬೈಕ್‌ ಕಳ್ಳನ ಬಂಧನ 2 ಲಕ್ಷ ಮೌಲ್ಯದ 6 ಬೈಕಗಳ ಜಪ್ತು. ತಿಲಕವಾಡಿ ಪೊಲೀಸ್ ಠಾಣೆ ಹಾಗೂ ನಗರ ವ್ಯಾಪ್ತಿಯಲ್ಲಿ ಮೋಟರ ವಾಹನ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಿಸಿ ಖಚಿತ ಮಾಹಿತಿಯನ್ನಾಧರಿಸಿ ಶ್ರೀ, ಅರುಣಕುಮಾರ ಕೋಳೂರ, ಎಸಿಪಿ ಖಡೇಬಜಾರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ಶ್ರೀ. ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿಯವರ ತಂಡ ಆರೋಪಿತನಾದ

 

– ಅಡಿವೇಶ ಲಕ್ಷ್ಮಣ ನಿಲ್ದಾಣಿ (20) ಸಾ|| ಲಗಮೇಶ್ವರ, ತಾ|| ಗೋಕಾಕ, ಹಾಅ ಭಾಗ್ಯ ನಗರ ಬೆಳಗಾವಿ ಈತನ್ನು ಪತ್ತೆ ಮಾಡಿ ಆತ ಕಳ್ಳತನ ಮಾಡಿದ 06 ಬೈಕ್‌ಗಳು (05-ಸ್ಟೆಂಡರ್ ಪ್ಲಸ್, 01-ಯಮಹಾ) ಒಟ್ಟು 2 ಲಕ್ಷ ಮೌಲ್ಯದವುಗಳನ್ನು ಜಪ್ತ ಮಾಡಿಕೊಂಡು, ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ. ಜಪ್ತ ಪಡಿಸಿಕೊಂಡ ಈ 6 ಮೋಟರ್ ಸೈಕಲ್‌ಗಳು ಉದ್ಯಮಬಾಗ ಠಾಣಿ-2,

ಬೆಳಗಾವಿ ಗ್ರಾಮೀಣ ಠಾಣೆ-2 & ತಿಲಕವಾಡಿ ಠಾಣೆಯ-2 ಪ್ರಕರಣಗಳಲ್ಲಿ ಕಳುವಾದ ಮೋಟರ್ ಸೈಕಲ್‌ಗಳೆಂದು ತನಿಖೆಯಿಂದ ತಿಳಿದು ಬಂದಿದೆ. ಈ ಮೊಟರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಶ್ರೀ. ದಯಾನಂದ ಶೇಗುಣಸಿ, ಶ್ರೀ ಸಂತೋಷ ದಳವಾಯಿ ಪಿ.ಎಸ್.ಐ(ಕಾ&ಸು) ಹಾಗೂ ಸಿಬ್ಬಂದಿಯವರಾದ ಶ್ರೀ ಮಹೇಶ ಪಾಟೀಲ, ಶ್ರೀ. ಲಾಡಜಿಸಾಬ ಮುಲ್ತಾನಿ ಶ್ರೀ. ನವೀನಕುಮಾರ ಗುಟ್ಟನ್ನವರ ಇವರ ತಂಡವನ್ನು ಮಾನ್ಯ ಪೊಲೀಸ್ ಆಯುಕ್ತರು, ಮಾನ್ಯ ಉಪ ಪೊಲೀಸ್ ಆಯುಕ್ತರು, (ಕಾ&ಸು) ಮಾನ್ಯ ಉಪ ಪೊಲೀಸ್ ಆಯುಕ್ತರು, (ಅ&ಸಂ), ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.