ಕರ್ನಾಟಕ ಫುಟ್ಬಾಲ್ ಟೀಮ್ ಗೆ ಶ್ರೇಯಸ್ ಆಯ್ಕೆ

ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಅಗಸಗಿ ಗ್ರಾಮದ ವಿದ್ಯಾರ್ಥಿ ಶ್ರೇಯಸ್ 14 ವರ್ಷದೊಳಗಿನ ರಾಜ್ಯ ಫುಟ್ಬಾಲ್ ಟೀಮ್ ಗೆ ಆಯ್ಕೆಯಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿ ಶ್ರೇಯಸ್ ರಾಷ್ಟ್ರೀಯ, ಅಂತರಾಷ್ಟೀಯ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.
ಯಮಕನಮರಡಿ ಮತಕ್ಷೇತ್ರದ ಅಗಸಗಿ ಗ್ರಾಮದ ಕೃಷಿಕ, ರೈತ ಪರ ಹೋರಾಟಗಾರ ಕಲಗೌಡ ಬಾಳಪ್ಪ ಪಾಟೀಲ್ ಇವರ ಮೊಮ್ಮಕ್ಕಳಾದ ಬಸವರಾಜ ಬಾಳಗೌಡ ಪಾಟೀಲ್ ಅವರು ಇಂಜಿನಿಯರಿಂಗ್ ನಲ್ಲಿ (BE) ಪದವಿ ಮುಗಿಸಿ, ಉನ್ನತ ವ್ಯಾಂಸಗಕ್ಕಾಗಿ ಅಮೇರಿಕಾಕ್ಕೆ ತೆರಳುತ್ತಿದ್ದಾರೆ. ಇನ್ನೊಬ್ಬ ಸಹೋದರ ಶ್ರೇಯಸ್ ನಿಂಗನಗೌಡ ಪಾಟೀಲ್ 14 ವರ್ಷಾದೊಳಗಿನ ಕರ್ನಾಟಕ ಫುಟ್ಬಾಲ್ ಟೀಮ್ ಗೆ ಆಯ್ಕೆಯಾಗಿ ರಾಷ್ಟ್ರೀಯ ಟೂರ್ನಮೆಂಟ್ ಆಡಲು ಇವತ್ತು ಸಂಜೆ ಬೆಂಗಳೂರಿನಿಂದ ಪ್ರಯಾಣ ಬೆಳಸುತ್ತಿದ್ದಾರೆ.
ರೈತ ಕಲಗೌಡ ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಸಹಕಾರ, ಆಶೀರ್ವಾದದಿಂದ ಮೊಮ್ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಯುವ ಪ್ರತಿಭೆಗಳಿಗೆ ಸಚಿವರು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಸಚಿವರರಿಗೆ ಧನ್ಯವಾದ ತಿಳಿಸಿದ್ದಾರೆ.//////