ಮೊಬೈಲ್ ಗೆ ಮೆಸೇಜ್ ಬರುತ್ತಿದ್ದಂತೆ ಮಹಿಳೆಯರು ಫುಲ್ ಖುಷ್

ಮೈಸೂರು: ಅರಮನೆ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ ನಾಲ್ಕನೇ ಗ್ಯಾರಂಟಿ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಮಹಿಳೆಯರ ಮೊಬೈಲ್ ಗೆ ಮೆಸೇಜ್ ಬರುತ್ತಿದ್ದಂತೆ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.
ಕರ್ನಾಟಕ ಸರ್ಕಾರ ಇವತ್ತು ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು, ರಾಜ್ಯದ ಒಟ್ಟು 1.10 ಕೋಟಿ ಕುಟುಂಬದ ಯಜಮಾನಿಯರ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಿದೆ. ಮುಖ್ಯವಾಗಿ ಅಲ್ಲಲ್ಲಿ ಲಂಬಾಣಿ ಮಹಿಳೆಯರ ಹಾಡು, ನೃತ್ಯದ ಮೂಲಕ ಗೃಹ ಲಕ್ಷ್ಮಿ ಯೋಜನೆಯನ್ನ ಸ್ವಾಗತಿಸಿದರೆ ಇನ್ನೊಂದೆಡೆ ಮನೆ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ ಮನೆಗಳನ್ನು ಸಿಂಗಾರ ಮಾಡಿದ್ದಾರೆ.
ಒಟ್ಟಾರೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಸರ್ಕಾರ ಇದ್ದರೆ ಹೀಗಿರಬೇಕು ಎಂಬ ಮಾತುಗಳು ಎಲ್ಲಡೆ ಕೇಳಿ ಬಂದವು. ಅಲ್ಲದೇ ಮುಂದೊಂದು ದಿನ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಈ ಯೋಜನೆ ಪಡೆದುಕೊಂಡ ಫಲಾನುಭವಿಗಳು ಆಶೀರ್ವದಿಸಿದ್ದಾರೆ.//////