Belagavi News In Kannada | News Belgaum

ಕಾಂಗ್ರೆಸ್‌ ದಲಿತರು, ರೈತರು, ಕಾರ್ಮಿಕರ ಪರ ಸರ್ಕಾರ: ಸಿಎಂ ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್ ದಲಿತರ, ರೈತರ , ಕಾರ್ಮಿಕರ ಅಲ್ಪಸಂಖ್ಯಾತರ ಪರ ಇರುವ ಸರ್ಕಾರ ಅಂತ ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ. ವಿರೋಧ ಪಕ್ಷಗಳ ಎಲ್ಲಾ ಮಾತುಗಳು ಸುಳ್ಳು ಎಂದು ಸಾಬೀತು ಮಾಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ತುಂಬಿವೆ. ನಾವು ಮಾಡಿರುವ ಸಾಧನೆಗಳನ್ನ ಜನತೆಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಹಿಂದೆ ಯಾವ ಸರ್ಕಾರವು 100 ದಿನದಲ್ಲಿ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ ಅದು ಸಾಧ್ಯ ಸಹ ಇಲ್ಲ. 165 ಭರವಸೆಗಳಲ್ಲಿ 158 ಭರವಸೆಗಳನ್ನ ಈಡೆರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ ಭರಸವೆಗಳನ್ನ ಈಡೇರಿಸುವ ವಿಶ್ವಾಸ ನಮಗಿದೆ. ಪ್ರಮುಖವಾಗಿ 5 ಗ್ಯಾಂರಂಟಿಗಳನ್ನ ಜನರ ಮುಂದೆ ಇಟ್ಟದ್ದೆವು. ಕರ್ನಾಟಕದಲ್ಲಿ 1 ಕೋಟಿ 10 ಲಕ್ಷ ಜನ ಇದಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ. ತಿಂಗಳಿಗೆ 2000 ರೂಪಾಯಿ ವರ್ಷಕ್ಕೆ 24,000 ರೂಪಾಯಿ ಹಣ ವರ್ಗಾವಣೆ ಮಾಡಿದ್ದೇವೆ. ಅಕ್ಕಿ ಕೊಡಲಿಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿಲ್ಲ ನಮಗೆ ಅಕ್ಕಿಯನ್ನ ಕೊಡಲಿಲ್ಲ. ಅದರೂ ನಾವು BPL ಹೊಂದಿರುವರಿಗೆ 5 Kg ಅಕ್ಕಿಯ ಹಣವನ್ನ 170ರೂ ನಂತೆ ಖಾತೆಗೆ ಜಮಾ ಮಾಡಿದ್ದೇವೆ ಎಂದು ತಿಳಿಸಿದರು.

ಗೃಹಜ್ಯೋತಿ ಅಡಿಯಲ್ಲು ಜೀರೋ ಬಿಲ್ ಬರುವಂತ ಗ್ಯಾರಂಟಿಯನ್ನ ಸಹ ಜಾರಿ ಮಾಡಿದ್ದೇವೆ. 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತೆ ಎನ್ನುತ್ತಿದ್ದರು. ಆದರೆ ಇವಾಗ 4 ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ, ರಾಜ್ಯ ದಿವಾಳಿಯಾಗಿಲ್ಲ. ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಯುವನಿಧಿ 5 ನೇ ಗ್ಯಾರಂಟಿಯನ್ನ ಜಾರಿ ಮಾಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.//////