Belagavi News In Kannada | News Belgaum

ಬೆಳಗಾವಿ: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ: ಬೆಳಗಾವಿ ರಾಮತೀರ್ಥನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಹಾಗೂ ಹೂಲಿಕಟ್ಟಿ ಗ್ರಾಮದ ಎಪಿಜೆ ಅಬ್ದುಲ ಕಲಾಂ ಪದವಿ ಪೂರ್ವ ವಸತಿ ಕಾಲೇಜು ಇಲ್ಲಿಗೆ ವಿಜ್ಞಾನ (ಎಂಎಸ್ಸಿ ಬಿ.ಎಡ್) ಹಾಗೂ ವಾಣಿಜ್ಯ (ಎಂಕಾಂ ಬಿಎಡ್) ವಿಭಾಗಕ್ಕೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆಗಸ್ಟ್ 31, 2023 ರಂದು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ರಾಮತೀರ್ಥನಗರ ಬೆಳಗಾವಿ ಇಲ್ಲಿ ಸಂದರ್ಶನ ಆಯೋಜಿಸಲಾಗಿದೆ.

ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ವಿವರ: ಭೌತಶಾಸ್ತ್ರ(1), ರಸಾಯನಶಾಸ್ತ್ರ (2), ವ್ಯವಹಾರ ಅಧ್ಯಯನ(2), ಲೆಕ್ಕಶಾಸ್ತ್ರ(1), ಗಣಿತ ಶಾಸ್ತ್ರ (1), ಜೀವಶಾಸ್ತ್ರ (1), ಅರ್ಥಶಾಸ್ತ್ರ (1)ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////