ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ

ಬೆಂಗಳೂರು: ಚಂದಿರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿ ವಿಕ್ರಮ ಲ್ಯಾಂಡರ್ ಚರಿತ್ರೆ ಬರೆದಿದೆ. ಇದೀಗ ಪ್ರಗ್ಯಾನ್ ರೋವರ್ ಸಂಶೋಧನಾ ಕಾರ್ಯ ಭರದಿಂದ ಸಾಗಿದೆ.
ಮೊದಲ ಅನ್ವೇಷಣೆಯಲ್ಲಿ ಚಂದ್ರನ ತಾಪಮಾನ ಕಂಡುಹಿಡಿದಿದ್ದ ರೋವರ್, ಇದೀಗ ಚಂದ್ರನಲ್ಲಿ ಹುದುಗಿರುವ ಖನಿಜ ಸಂಪತ್ತು ಪತ್ತೆ ಹಚ್ಚಿದೆ. ರೋವರ್‌ನಲ್ಲಿರುವ ಎಲ್ ಐಬಿಎಸ್ ಉಪಕರಣವು ಖನಿಜಾಂಶಗಳನ್ನು ಪತ್ತೆಹಚ್ಚಿ ಇಸ್ರೋಗೆ ರವಾನಿಸಿದೆ. ಖನಿಜಾಂಶಗಳ ಇರುವಿಕೆ ನೋಡಿ ಇಸ್ರೋ ವಿಜ್ಞಾನಿಗಳೇ ಅಚ್ಚರಿಗೊಂಡಿದ್ದಾರೆ. ಆಗಸ್ಟ್ 23ಕ್ಕೆ ಚಂದ್ರನ (ಒooಟಿ) ಅಂಗಳಕ್ಕೆ ಎಂಟ್ರಿಕೊಟ್ಟ ಪ್ರಗ್ಯಾನ್ ರೋವರ್ ಒಟ್ಟು 14 ದಿನ ಕಾರ್ಯನಿರ್ವಹಿಸಲಿದೆ.
ಈಗಾಗಲೇ 7 ದಿನ ಕಳೆದಿದ್ದು, ಇನ್ನೂ ಏಳು ದಿನ ಬಾಕಿಯಿದೆ. ಹೀಗಾಗಿ ರೋವರ್ ಸಂಶೋಧನಾ ಕಾರ್ಯ ಚುರುಕುಗೊಳಿಸಿದ ಇಸ್ರೋ ವಿಜ್ಞಾನಿಗಳು ಚಂದ್ರನಲ್ಲಿ ಹೈಡ್ರೋಜನ್ ಕುರಿತ ಅಧ್ಯಯನ ನಡೆಸ್ತಿದ್ದಾರೆ. ಚಂದ್ರನ ದಕ್ಷಿಣ ಪ್ರದೇಶದಲ್ಲಿ ರೋವರ್ ಓಡಾಡುತ್ತಿದ್ದು, ದೂರದಲ್ಲಿ ನಿಂತು ವಿಕ್ರಮ ಲ್ಯಾಂಡರ್ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ.. ಇಸ್ರೋ ಟ್ವೀಟರ್ನಲ್ಲಿ ಫೋಟೋ ಹಂಚಿಕೊಂಡಿದೆ.//////