Belagavi News In Kannada | News Belgaum

ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ 28 ಗ್ರಾಮಗಳು ಸೇರ್ಪಡೆ

ಬೆಳಗಾವಿ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 4(ಎ)(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಹೆಚ್ಚುವರಿಯಾಗಿ 28 ಗ್ರಾಮಗಳನ್ನು ಸೇರಿಸಿ ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ(ಬುಡಾ) ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
28 ಗ್ರಾಮಗಳನ್ನು ಬುಡಾ ವ್ಯಾಪ್ತಿಗೆ ಬರುವುದರಿಂದ ಈ ಗ್ರಾಮಗಳಲ್ಲಿಯೂ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ. ಜತೆಗೆ ಈ ಗ್ರಾಮಗಳಲ್ಲಿರುವ ನಿವೇಶನಗಳಿಗೂ ಉತ್ತಮ ಬೆಲೆ ದೊರೆಯಲಿದೆ. ಪರಿಷ್ಕೃತ ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಪಟ್ಟಣ ಹಾಗೂ ಗ್ರಾಮಗಳು ಹೊನಗಾ, ಕಲಕಾಂಬ, ಮುಚ್ಚಂಡಿ, ಅಷ್ಟೆ(ಅಷ್ಟಗಿ), ನಿಲಜಿ, ಮುತಗಾ, ಸಾಂಬ್ರಾ, ಬಾಳೆಕುಂದ್ರಿ ಕೆ.ಎಚ್, ಬಾಳೆಕುಂದ್ರಿ ಬಿ.ಕೆ, ಹೊನ್ನಿಹಾಳ, ಮಾವಿನಕಟ್ಟಿ, ಬಸರಿಕಟ್ಟಿ, ಮಾಸ್ತಮರಡಿ, ಶಿಂಧೋಳ್ಳಿ, ಕೊಂಡಸಕೊಪ್ಪ, ಧಾಮಣೆ, ಯಳ್ಳೂರ (ಎ. ಹಟ್ಟಿ), ಯರಮಾಳ, ಕುಟ್ಟಲವಾಡಿ, ನಾವಗೆ, ಹಂಗರಗಾ, ಕಲ್ಲೆಹೋಳ, ಸುಳಗಾ, ಗೋಜಗಾ, ಮಣ್ಣೂರ, ಅಂಬೆವಾಡಿ (ಎ. ಜಾಫರವಾಡಿ), ಅಲತಗಾ, ಕಡೋಲಿ ಇವುಗಳು ಹೆಚ್ಚುವರಿಯಾಗಿ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಸೇರ್ಪಡೆಯಾಗಿರುತ್ತವೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////