Belagavi News In Kannada | News Belgaum

ನಾಳೆಯೇ ಭಾರತ-ಪಾಕಿಸ್ತಾನ ಹೈವೋಲ್ಟೇಜ್​​ ಪಂದ್ಯ

ಬೆಂಗಳೂರು: ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್​ ಟೂರ್ನಿ ಈಗಾಗಲೇ ಶುರುವಾಗಿದೆ. ನಾಳೆ ನಡೆಯಲಿರೋ ಭಾರತ, ಪಾಕ್​​ ತಂಡಗಳ ನಡುವಿನ ಹೈವೋಲ್ಟೇಜ್​​ ಪಂದ್ಯ ನೋಡಲು ಇಡೀ ಕ್ರೀಡಾ ಲೋಕವೇ ಕಾದು ಕುಳಿತಿದೆ.

ಹೌದು…ಬರೋಬ್ಬರಿ 4 ವರ್ಷಗಳ ಬಳಿಕ ಏಕದಿನ ಮಾದರಿಯಲ್ಲಿ ಪಾಕ್​​ ಮತ್ತು ಭಾರತ ತಂಡಗಳು ಮುಖಾಮುಖಿ ಆಗುತ್ತಿವೆ.
4 ವರ್ಷಗಳ ಹಿಂದೆ 2019 ಜೂನ್​​ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್​​​ನಲ್ಲಿ ಭಾರತ, ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಅಂದು ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಆಗಿದ್ದರು. ತಂಡದಲ್ಲಿ ಕೂಲ್​​ ಕ್ಯಾಪ್ಟನ್​ ಕೂಡ ಇದ್ದರು. ಅಂದು ಪಾಕ್​​ ತಂಡದ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಈಗ ಆ ಸೇಡನ್ನು ಪಾಕ್​ ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಪಂದ್ಯದ ರೋಚಕತೆ ಇನ್ನೂ ಹೆಚ್ಚಾಗಿದೆ. ಕೇವಲ ಇಷ್ಟು ಮಾತ್ರವಲ್ಲ ಮುಂದಿನ ವಿಶ್ವಕಪ್​ ದೃಷ್ಟಿಯಿಂದಲೂ ನಾಳೆಯ ಪಂದ್ಯ ಮಹತ್ವ ಪಡೆದುಕೊಂಡಿದೆ.//////