Belagavi News In Kannada | News Belgaum

ಹನಬರ್ ಯಾದವ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ಉತ್ಸವ ಪೂರ್ವಭಾವಿ ಸಭೆ

ಹುಕ್ಕೇರಿ : ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯ ಅವರ ಜಯಂತಿಯನ್ನು ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಆಚರಿಸಬೇಕು. ಕೇವಲ ಕಾಟಾಚಾರವಾಗದೆ ಸರಕಾರದ ನಿರ್ದೇಶನದಂತೆ ಸಪ್ಟಂಬರ್ 17 ರಂದು ಅದ್ದೂರಿಯಾಗಿ ಜರುಗಬೇಕು ಎಂದು ವಿಶ್ವ ಕರ್ಮ ಸಮಾಜದ ಬಾಂಧವರು ಅಗ್ರಹಿಸಿದರು.

ಅವರು ಶನಿವಾರ ತಾಲುಕಾ ಆಡಳಿತದದ ಸಭಾಭವನದಲ್ಲಿ ಜರುಗಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಬಾಂಧವರು ಅಗ್ರಹಿಸಿದರು.
ಗ್ರಾಮ ಪಂಚಾಯಿತಿಯ ಮಟ್ಟದಿಂದ ಹಿಡಿದು ತಾಲೂಕಿನ ವಿವಿಧ ಇಲಾಖೆಗಳಲ್ಲಿ ಶ್ರೀ ವಿಶ್ವಕರ್ಮ ಸಮಾಜ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿಗಳನ್ನು ಅಧಿಕಾರಿಗಳು ಉತ್ಸಾಹದಿಂದ ಆಚರಣೆ ಮಾಡುತ್ತಿಲ್ಲ ಎಂದು ಸಮಾಜ ಬಾಂಧವರು ಆರೋಪಿಸಿದರು..
ಜಯಂತಿ ಉತ್ಸವದಲ್ಲಿ ಎಲ್ಲಾ ವರ್ಗದ ಅಧಿಕಾರಿಗಳು ಸಂಪೂರ್ಣವಾಗಿ ಭಾಗವಹಿಸಬೇಕು, ವಿಶ್ವಕರ್ಮ ಸಮಾಜದ ಅಮರಶಿಲ್ಪಿ ಜಕಣಾಚಾರ್ಯ ಅವರ ಮೂರ್ತಿ ಪ್ರತಿಷ್ಠಾಪಣೆ ಮತ್ತು ಸರ್ಕಲ್ ನಿರ್ಮಿಸಲು ತಾಲೂಕ ಆಡಳಿತ ಜಾಗ ಗುರುತಿಸಿ ಅವಕಾಶ ನೀಡಬೇಕೆಂದು ಕೋರಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರ್ಕಾರದ ಆದೇಶದಂತೆ ಸಪ್ಟೆಂಬರ್ 6ರಂದು ಜಿಲ್ಲಾ ಮಟ್ಟದ ಕಾರ್ಯಕ್ರಮ ಜರುಗುವುದರಿಂದ ಹುಕ್ಕೇರಿಯಲ್ಲಿ ದಿ 11ರಂದು ಆಚರಿಸಲು ಅವಕಾಶ ನೀಡಬೇಕೆಂದು ಯಾದವ ಹನಬರ  ಸಮಾಜದ ಮುಖಂಡರು ಮನವಿ ಮಾಡಿಕೊಂಡರು .
ಗ್ರೇಡ 2- ತಹಸಿಲ್ದಾರ್ ಪ್ರವೀಣ್ ಕಲ್ಲೋಳಿ ಮಾತನಾಡಿ ಎರಡು ಸಮಾಜದ ಮುಖಂಂಡರ ನಿರ್ಣಯದಂತೆ ಸಲಹೆ ಸೂಚನೆಗಳನ್ನು ಪಡೆದುಕೊಂಡು ತಾಲೂಕ ಆಡಳಿತ ಮೂಲಕ ಜಯಂತಿ ಉತ್ಸವಗಳನ್ನು ಆಚರಿಸಲಾಗುವದು ಎಂದರು..

ಶಿರಸ್ತೆದಾರ ಎನ್ ಆರ, ಪಾಟೀಲ, ಮುಖಂಡರಾದ ಮೌನೇಶ ಪೋತದಾರ, ರವಿ ಬಡಿಗೇರ, ಗಜಾನನ ಬಡಿಗೇರ ಕೆ.ಬಿ ಬಡಿಗೇರ, ಎಮ್ ಬಿ , ನಾರಾಯಣ ಬಡಿಗೇರ, ಮುರಳಿ, ಐ.ಬಿ ಸಂತೋಷ , ವಾಸುದೇವ ಬಡಿಗೇರ, ವಿಷ್ಟು, ಶಿವಾನಂದ ಪಾಟೀಲ, ಶಿವಲಿಂಗ ಮುತ್ನಾಳ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು..