Belagavi News In Kannada | News Belgaum

ಕಾರು- ಬೈಕ್ ಮುಖಾಮುಖಿ ಡಿಕ್ಕಿ: ಅಣ್ಣ- ತಂಗಿ ಧಾರುಣ ಸಾವು

ಯಕ್ಸಂಬಾ:ಕಾರು ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಮೇಲಿದ್ದ ಅಣ್ಣ-ತಂಗಿ  ಸಾವನ್ನಪ್ಪಿದ ಘಟನೆ ಸಮೀಪದ ಮಲಿಕವಾಡ-ನಣದಿವಾಡಿ ರಸ್ತೆಯಲ್ಲಿ ನಡೆದಿದೆ..

 

ಪ್ರಶಾಂತ ನಾಗರಾಜ ತುಳಸಿಕಟ್ಟಿ(21),ಪ್ರಿಯಾಂಕ ನಾಗರಾಜ ತುಳಸಿಕಟ್ಟಿ (19) ಸಾವನ್ನಪ್ಪಿದ ಅಣ್ಣ-ತಂಗಿ ಎಂದು ತಿಳಿದು ಬಂದಿದೆ.ಮೂಲತಃ  ಸದಲಗಾ ಪಟ್ಟಣದವರು.ಇಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ  ದೇವಸ್ಥಾನಗೆಂದು ಸ್ಕೂಟಿಯ ಮೇಲೆ ಹೋಗುತ್ತಿರುವ ಕಾರ ಹಾಗೂ ಸ್ಕೂಟಿ ಮಧ್ಯೆ ವೇಗವಾಗಿ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ  ಅಣ್ಣ ಪ್ರಶಾಂತ ತುಳಸಿಕಟ್ಟಿ, ತಂಗಿ ಪ್ರಿಯಾಂಕ ತುಳಸಿಕಟ್ಟಿ ರಸ್ತೆ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು..

ತಕ್ಷಣವೇ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮೂಲಕ ಕೊಲ್ಹಾಪೂರದ ಕಣೇರಿ‌ಯ ಆಸ್ಪತ್ರೆಗೆ ಸಾಗಿಸುವಾಗ ದಾರಿ‌ ಸಾವನ್ನಪ್ಪಿದ್ದಾರೆ..ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.