ಗೋಕಾಕ್ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಶಾಖೆ ಉದ್ಘಾಟನೆ:
ಕನ್ನಡ ಶಿಕ್ಷಣ ಕನ್ನಡ ನೆಲ ನುಡಿ ಗಾಗಿ ನಾವೆಲ್ಲರೂ ಶ್ರಮಿಸೋಣ: ಜಿಲ್ಲಾಧ್ಯಕ್ಷ ಬಾಳಪ್ಪಾ ಗುಡಗೇನಟ್ಟಿ

ಬೆಳಗಾವಿ : ಗೋಕಾಕ್ ತಾಲೂಕು ಕೇಸಪ್ನಟ್ಟಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಶಾಖಾ ಉದ್ಘಾಟನೆ ಮಾಡಲಾಯಿತು ಗ್ರಾಮ ಶಾಖಾ ಅಧ್ಯಕ್ಷರನ್ನಾಗಿ ಬೀಮಶಿ. ಕೋಟೆ.
ಮತ್ತು ಅಧ್ಯಕ್ಷರನ್ನಾಗಿ ಪಕೀರಪ್ಪ ಸನದಿ ಹಾಗೂ ಕಾರ್ಯಾಧ್ಯಕ್ಷರು ಬಸವರಾಜ್ ಪೋಟ ಮತ್ತು ಸದಸ್ಯರು ನೇಮಕಾತಿ ಮಾಡಲಾಯಿತು.
ಗ್ರಾಮದ ಹಿರಿಯ ಮುಖ್ಯಸ್ಥರು ಗ್ರಾಮ ಪಂಚಾಯಿತಿ ಮಾಜಿ ಚರ್ಮನ್ ಮಂಜುನಾಥ್ ಬೆಂಟ
ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಾಳಪ್ಪಾ ಬ ಗುಡಗೇನಟ್ಟಿ ರವರು ಗ್ರಾಮದಲ್ಲಿ ಶಾಖಾ ಅಧ್ಯಕ್ಷರ ನೇಮಕಾತಿ ಮಾಡುವ ಮುಖಾಂತರ ಗ್ರಾಮದ ಶಾಖೆ ಉದ್ಘಾಟಿಸಿದರು.
ನಂತರ ಮಾತನಾಡಿ ಕನ್ನಡ ನೆಲ ನುಡಿ ಉಳಿವಿಕೆಗಾಗಿ ನಾವು ನೀವು ಈ ಶಾಖೆಯನ್ನು ಉದ್ಘಾಟಿಸಲಾಗಿದ್ದು ಕನ್ನಡ ಭುವನೇಶ್ವರಿ ಆ ತಾಯಿಯ ಸೇವೆ ಮಾಡಲು ನಮಗೆಲ್ಲರಿಗೂ ಅವಕಾಶ ಕೊಟ್ಟಿದ್ದು ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಕನ್ನಡದ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಕನ್ನಡ ಉಳಿಯುವಿಕೆಗಾಗಿ ನಾವೆಲ್ಲರೂ ದುಡಿಯೋಣ ಎಂದು ಬಾಳಪ್ಪ ಗುಡಗೇನಟ್ಟಿ ಕಿವಿಮಾತು ಹೇಳಿದರು.