Belagavi News In Kannada | News Belgaum

ಮಾಜಿ ಸಿಎಂ-ಮಾಜಿ ಸಚಿವನ ಬಂಧಿಸಿದ ಸಿಐಡಿ ಪೊಲೀಸರು

ಆಂಧ್ರ ಪ್ರದೇಶ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು  ಸಿಐಡಿ ಪೊಲೀಸರು ಬಂಧಿಸಿದ್ದಾರೆ.

‘ಬಾಬು ಶ್ಯೂರಿಟಿ-ಭವಿಷ್ಯಕ್ಕೆ ಗ್ಯಾರಂಟಿ’ ಎಂಬ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ರಾತ್ರಿ ನಂದ್ಯಾಲದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಂದ್ರಬಾಬು ಭಾಗವಹಿಸಿದ್ದರು. ಬಳಿಕ ಆರ್.ಕೆ ಫಂಕ್ಷನ್ ಹಾಲ್‌ನಲ್ಲಿ ತಂಗಿದ್ದರು, ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಅವರನ್ನು ಬಂಧಿಸಲಾಗಿದೆ..

 

ಸ್ವಲ್ಪ ಸಮಯದ ಬಳಿಕ ಚಂದ್ರಬಾಬು ನಾಯ್ಡು ಅವರನ್ನು ವಿಶಾಖಪಟ್ಟಣಕ್ಕೆ ಕರೆದೊಯ್ಯಲಾಯಿತು. ಇವರ ಬಂಧನದ ಬೆನ್ನಲ್ಲೇ ವಿಶಾಖದಲ್ಲಿ ಮಾಜಿ ಸಚಿವ ಗಂಟಾ ಶ್ರೀನಿವಾಸ ಅವರ ಬಂಧನ ಸಹ ಆಗಿದೆ..

ಏನಿದು ಪ್ರಕರಣ: ಇಂದು ಬೆಳಗ್ಗೆ 6 ಗಂಟೆ ಸುಮಾರು ನಂದ್ಯಾಲದ ಆರ್‌ಕೆ ಫಂಕ್ಷನ್‌ ಹಾಲ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ನಿಂದ ಕೆಳಗಿಳಿದಾಗ ಪೊಲೀಸರು ಅವರೊಂದಿಗೆ ಮಾತುಕತೆ ನಡೆಸಿ ವಶಕ್ಕೆ ಪಡೆದರು..

ಈ ವೇಳೆ ಮಾನವ ಹಕ್ಕುಗಳನ್ನು ಏಕೆ ಉಲ್ಲಂಘಿಸಲಾಗುತ್ತಿದೆ ಎಂದು ಚಂದ್ರಬಾಬು ಪ್ರಶ್ನಿಸಿದ ಅವರು ನಾನು ತಪ್ಪು ಮಾಡಿದರೆ ರಸ್ತೆಯಲ್ಲೇ ನೇಣು ಹಾಕಿ. ಯಾವ ಕಾನೂನಿನ ಅಡಿಯಲ್ಲಿ ನನ್ನನ್ನು ಬಂಧಿಸುತ್ತೀರಿ. ಮೂಲಭೂತ ಸಾಕ್ಷ್ಯಗಳಿಲ್ಲದೆ ನನ್ನನ್ನು ಹೇಗೆ ಬಂಧಿಸುತ್ತೀರಿ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು..

ನಾವು ಹೈಕೋರ್ಟ್‌ಗೆ ಪ್ರಾಥಮಿಕ ಸಾಕ್ಷ್ಯವನ್ನು ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಚಂದ್ರಬಾಬು ಪರ ವಕೀಲರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ವಕೀಲರು ಪೊಲೀಸರಿಗೆ ಸಾಕ್ಷ್ಯವನ್ನು ತೋರಿಸುವಂತೆ ಕೇಳಿದರು..

ರಿಮಾಂಡ್ ವರದಿಯಲ್ಲಿ ಎಲ್ಲವೂ ಇದೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ನಮ್ಮನ್ನು ಸುತ್ತುವರಿದು ಬೆದರಿಕೆ ಹಾಕುವುದು ಸರಿಯಲ್ಲ. ನಾವು ವಿಚಲಿತರಾಗಿಲ್ಲ, ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದು ಚಂದ್ರಬಾಬು ಹೇಳಿದರು. ಚಂದ್ರಬಾಬು ಅವರನ್ನು ಬಂಧಿಸಿರುವುದು ಕಾನೂನು ಬಾಹಿರ ಎನ್ನುತ್ತಾರೆ ವಕೀಲರು..

ಮತ್ತೊಂದೆಡೆ ಮಾಧ್ಯಮದವರನ್ನು ಪೊಲೀಸರು ಅಲ್ಲಿಂದ ಕಳುಹಿಸಿದ್ದಾರೆ. ಪೊಲೀಸರೊಂದಿಗೆ ವಕೀಲರು ಚರ್ಚೆ ಕೈಗೊಂಡಿದ್ದರು. ವಕೀಲರು ಬಂಧನದ ದಾಖಲೆಗಳನ್ನು ಪರಿಶೀಲಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಎಲ್ಲ ದಾಖಲೆಗಳನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಚಂದ್ರಬಾಬು ಹೆಸರನ್ನು ವಕೀಲರು ಪ್ರಶ್ನಿಸಿದ್ದಾರೆ..

ಈ ವೇಳೆ ಎಫ್‌ಐಆರ್ ನನ್ನ ಹೆಸರಿಲ್ಲದೆ ಹೇಗೆ ಬಂಧಿಸಲು ಸಾಧ್ಯ ಎಂದು ಟಿಡಿಪಿ ಮುಖ್ಯಸ್ಥರು ಪೊಲೀಸರನ್ನು ಪ್ರಶ್ನಿಸಿದರು. ನನ್ನನ್ನು ಬಂಧಿಸುವ ಮುನ್ನ ದಾಖಲೆಗಳನ್ನು ನೀಡುವಂತೆ ಹೇಳಿದರು.

ಈ ವೇಳೆ ಪೊಲೀಸರು ಬಂಧನದ ನಂತರ ಸೂಕ್ತ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು. ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂದು ಕೇಳುವ ಹಕ್ಕು ಸಾಮಾನ್ಯ ಪ್ರಜೆಗೂ ಇದೆ ಎಂದು ಚಂದ್ರಬಾಬು ಹೇಳಿದರು..

ಬಂಧನಕ್ಕೆ ನೋಟಿಸ್ ಜಾರಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 24 ಗಂಟೆಗಳಲ್ಲಿ ಬಂಧನಕ್ಕೆ ಕಾರಣಗಳಿರುವ ದಾಖಲೆಗಳನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ..

ಇನ್ನು ಚಂದ್ರಬಾಬು ನಾಯ್ಡು ಬೆನ್ನಲ್ಲೇ ಮಾಜಿ ಸಚಿವ ಗಂಟಾ ಶ್ರೀನಿವಾಸರನ್ನು ಪೊಲೀಸರು ವಿಶಾಖದಲ್ಲಿ ಬಂಧಿಸಿದ್ದಾರೆ. ಚಂದ್ರಬಾಬು ನಾಯ್ಡು ಇನ್ನು ಕೆಲವೇ ಕ್ಷಣಗಳಲ್ಲಿ ವಿಶಾಖ ತಲುಪಲಿದ್ದಾರೆ..