Belagavi News In Kannada | News Belgaum

ಭಾರತ್​ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ ಅಧಿಕಾರಕ್ಕೆ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು  ಕನ್ಯಾಕುಮಾರಿಯಿಂದ  ಕಾಶ್ಮೀರದವರೆಗೆ ನಡೆಸಿದ ಭಾರತ್​ ಜೋಡೋ ಯಾತ್ರೆಯ  ಪ್ರಭಾವದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ” ಎಂದು  ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ರಾಹುಲ್​ಗಾಂಧಿ ನಡೆಸಿದ ಭಾರತ್​ ಜೋಡೋ ಯಾತ್ರೆಗೆ ಸೆ. 7ಕ್ಕೆ ಒಂದು ವರ್ಷ ತುಂಬಿರುವ  ನಿಮಿತ್ತವಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಭವನದಿಂದ ರಾಣಿ ಚನ್ನಮ್ಮ ವೃತ್ತದವರೆಗೂ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಪಾದಯಾತ್ರೆ ನಡೆಸಿ ಅವರು ಮಾತನಾಡಿದರು.

ಭಾರತ್​  ಜೋಡೋ ಯಾತ್ರೆಗೆ  ಒಂದು ವರ್ಷ ಪೂರ್ಣವಾಗಿದೆ. ಈ ಪಾದಯಾತ್ರೆ ಬಡಜನರ ಮನಮುಟ್ಟಿದೆ, ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಅಂತರದಿಂದ ಗೆಲುವು ಕಂಡಿದೆ. ಕಾಂಗ್ರೆಸ್​ನಾಯಕ ರಾಹುಲ್​ ಗಾಂಧಿ ಅವರು  ರಾಜ್ಯದಲ್ಲಿ  ಭಾರತ್​ ಜೋಡೋಯಾತ್ರೆ  ವೇಳೆ  ನಾವು ಕೂಡ,  ಭಾಗವಹಿಸಿ ಅನೇಕ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ  ಪಾದಯಾತ್ರೆ ಮಾಡಲಾಗಿತ್ತು ಎಂದರು.

2.0  ಭಾರತ್​ ಜೋಡೋ  ದೇಶದ ದಕ್ಷೀಣೋತ್ತರ ರಾಜ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಭಾರತ್​ ಜೋಡೋ ಯಾತ್ರೆಯ ಪಾದಯಾತ್ರೆ ಮಾಡೋಣ ಎಂದು ಶುಭ ಹಾರೈಸಿದರು.

 

ಶಾಸಕ  ಆಸೀಪ್  ಸೇಠ  ಅವರು ಮಾತನಾಡಿ,  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ದೇಶದಲ್ಲಿ ನಡೆಸಿದ ಪಾದಯಾತ್ರೆಯ ಫಲವಾಗಿ ಕಾಂಗ್ರೆಸ್‌  ರಾಜ್ಯದಲ್ಲಿ 136  ಸೀಟು   ಗೆಲ್ಲಲ್ಲು  ಅನುಕೂಲವಾಗಿದೆ.  ಚುನಾವಣೆ ಪೂರ್ವ ರಾಜ್ಯದ ಜನತೆಗೆ  ನೀಡಿದ್ದ ಭರವಸೆಯನ್ನು  ಈಡೇಸಲಾಗಿದೆ.  ನುಡಿದಂತೆ ನಡೆದ ಸರ್ಕಾರ ಯಾವುದಾದರೆ ಇದ್ದರೆ ಅದು, ನಮ್ಮ ಕಾಂಗ್ರೆಸ್‌ ಸರ್ಕಾರ ಎಂದರು.

 

 

ಶಾಸಕ ಮಹಾಂತೇಶ್ ಕೌಜಲಗಿ ಅವರು ಮಾತನಾಡಿ, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯ ಫಲವಾಗಿ, ದೇಶದ ಜನ ಅನುಭವಿಸುತ್ತಿರುವ ಕಷ್ಟಗಳು,ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದ ಕಾರಣ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದೆ ಎಂದರು./////