Belagavi News In Kannada | News Belgaum

ಅಂಗಡಿ-ಮುಂಗಟ್ಟುಗಳ ನಾಮಫಲಕದ ಶೇ.60 ರಷ್ಟು ಭಾಗ ಕನ್ನಡ ಭಾóಷೆಗೆ ಮೀಸಲು

 

ಬೆಳಗಾವಿ, ಸೆ.012 : ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಅಂಗಡಿ-ಮುಂಗಟ್ಟುಗಳು/ವ್ಯಾಪಾರ-ವಹಿವಾಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮವಾಗಿ ಅಂದರೆ ಒಟ್ಟು ನಾಮಫಲಕದ ಶೇ.60 ರಷ್ಟು ಭಾಗವನ್ನು ಕನ್ನಡ ಭಾóಷೆಗೆ ಮೀಸಲಿಡುವಂತೆ ಸರ್ಕಾರದ ಸುತ್ತೋಲೆಯನ್ವಯ ಕಡ್ಡಾಯವಾಗಿರುತ್ತದೆ.

ಆದಕಾರಣ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಕಾರರು ನಾಮಫಲಕಗಳಲ್ಲಿ ಕನ್ನಡ ಭಾóಷೆಗೆ ಪ್ರಥಮ ಅಧ್ಯತೆ ನೀಡಿ ಕನ್ನಡ ಭಾಷೆಯನ್ನು ಬರೆಯಿಸಿ ತದನಂತರ ಅನ್ಯ ಭಾಷೆಯನ್ನು ಸಹ ಬರೆಯಿಸಬಹುದಾಗಿದೆ.
ಕಾರಣ ನಗರದ ವ್ಯಾಪಾರ-ವಹಿವಾಟುದಾರರು ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.