Belagavi News In Kannada | News Belgaum

ವಿಶ್ವಕರ್ಮ ಜಯಂತಿ ಆಚರಣೆ ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆಚರಿಸುವಂತೆ ಡಿಸಿಗೆ ಮುಖಂಡರ ಮನವಿ

ಬೆಳಗಾವಿ : ವಿಶ್ವಕರ್ಮ ಜಯಂತಿ ಆಚರಣೆ ಕುರಿತು ಡಿಸಿಗೆ ಮುಖಂಡರ ಮನವಿ
ಬೆಳಗಾವಿ ಶ್ರೀ ವಿಶ್ವಕರ್ಮ ಜಯಂತಿ ಸಮಿತಿ ನಿಯೋಗ
ಸೆ.17 ರಂದು ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ಈ ಜನ್ಮ ದಿನಾಚರಣೆಯನ್ನು ಎಲ್ಲಾ ಹಂತದ ಸರ್ಕಾರಿ ಕಚೇರಿಗಳಲ್ಲಿ ಅದ್ಧೂರಿಯಾಗಿ ಆಚರಿಸುವಂತೆ ವಿಶ್ವಕರ್ಮ ಜಯಂತಿ ಉತ್ಸವ ಸಮಿತಿ, ವಿಶ್ವಕರ್ಮ ಸೇವಾ ಸಂಘ ಹಾಗೂ ಶ್ರೀ ವಿಶ್ವಕರ್ಮ ಸಮಾಜದಿಂದ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಸೋಮವಾರ ದಿನಾಂಕ 11 9 2023 ರಂದು ಬೆಳಿಗ್ಗೆ ಬೆಳಗಾವಿಯ ಜಿಲ್ಲಾಧಿಕಾರಗಳಿಗೆ ಮನವಿ ಸಲ್ಲಿಸಿದರು . ಬರುವ ಭಾನುವಾರ ಸೆ.17ರಂದು ವಿಶ್ವಕರ್ಮ ಜಯಂತಿ , ಜಿಲ್ಲಾಡಳಿತ ಅದ್ಧೂರಿಯಾಗಿ ಆಚರಿಸಬೇಕು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಶ್ವಕರ್ಮ ಜಯಂತಿ ಆಚರಿಸುವ ಬಗ್ಗೆ ಮಾತನಾಡಿದ್ದಾರೆ.

 

ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತರಲಿದ್ದಾರೆ ಆದಕಾರಣ ರಾಜ್ಯದ ಎಲ್ಲಾ ಸರಕಾರಿ ಕಛೇರಿ, ಗ್ರಾ.ಪಂ., ಸರಕಾರಿ ಶಾಲೆ, ಅನುದಾನಿತ ಶಾಲೆ ಗಳಲ್ಲಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಶ್ರೀ ವಿಶ್ವಕರ್ಮ ಜಯಂತಿ ಉತ್ಸವ ಸಮಿತಿ, ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಂಘ ಬೆಳಗಾವಿ ಹಾಗೂ ವಿಶ್ವಕರ್ಮ ಸಮಾಜ ಬೆಳಗಾವಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಉಮೇಶ್ ಪತ್ತಾರ್ ಅಧ್ಯಕ್ಷರು ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಂಘ ಬೆಳಗಾವಿ ವಿಶ್ವಕರ್ಮ ಜಯಂತಿ ಉತ್ಸವದ ಅಧ್ಯಕ್ಷರು ರಾಘವೇಂದ್ರ ಹವನೂರ್ ಜ್ಯೋತಿ ಸುತಾರ್, ರಮೇಶ ದೇಸೂರಕರ್, ದಿವ್ಯಶ್ರೀ ದೇಸೂರಕರ್, ರೇಣುಕಾ ಕಣಬರಕರ ಸೇರಿದಂತೆ ವಿಶ್ವಕರ್ಮ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.